ಉಪ್ಪಿನಕುದ್ರುವಿನಲ್ಲಿ ಗೊಂಬೆಯಾಟ ಪ್ರದರ್ಶನ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರಥಮ ತಿಂಗಳ ಕಾರ್ಯಕ್ರಮ ಏ.೧೯ ರಂದು ಸಂಜೆ. ೪.೩೦ಕ್ಕೆ ನಡೆಯಲಿದೆ. ಏಪ್ರಿಲ್ ತಿಂಗಳ ಗೊಂಬೆ ಮನೆ ಅತಿಥಿಯಾಗಿ ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಸೀನಿಯರ್ ಮೆನೇಜರ್ ಬಾಬುರಾಯ್ ಶೆಣೈ ಭಾಗವಹಿಸಲಿದ್ದು, ಉಪ್ಪಿನಕುದ್ರುವಿನ ಮಂಜುನಾಥ ಐತಾಳ್ ಅವರನ್ನು ಸನ್ಮಾನಿಸಲಾಗುವುದು. ತಿಂಗಳ ಪ್ರಥಮ ಕಾರ್ಯಕ್ರಮವಾಗಿ ಅಂತರಾಷ್ಟ್ರೀಯ ಖ್ಯಾತಿಯ ಶ್ರೀ ಗಣೇಶ್ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನಕುದ್ರು ಇವರಿಂದ ಯಕ್ಷಗಾನ ಗೊಂಬೆಯಾಟ ಪ್ರದರ್ಶನ ನಡೆಯಲಿದೆ ಎಂದು ಅಕಾಡೆಮಿಯ ರುವಾರಿ ಭಾಸ್ಕರ್ ಕೊಗ್ಗ ಕಾಮತ್ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com