ವಂಡ್ಸೆ ಪ್ರಗತಿಬಂಧು ಒಕ್ಕೂಟದ 10ನೇ ವರ್ಷದ ವಾರ್ಷಿಕೋತ್ಸವ

ವಂಡ್ಸೆ: ಕರಾವಳಿ ಭಾಗದಲ್ಲಿ ಅಗಾಧವಾದ ಸಂಪನ್ಮೂಲವಿದೆ. ಸ್ವ ಉದ್ಯೋಗ, ಕೃಷಿಗೆ ಪೂರಕವಾದ ಅವಕಾಶಗಳಿವೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬನೆ ಸಾಧಿಸುವುದು ನಮ್ಮ ಆದ್ಯತೆ ಆಗಬೇಕು. ಆ ನಿಟ್ಟಿನಲ್ಲಿ ಧ.ಗ್ರಾ. ಯೋಜನೆ ಸದಾ ಸಹಕಾರ ನೀಡುತ್ತದೆ ಎಂದು ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಆಜ್ರಿ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಂಡ್ಸೆ ವಲಯದ ಮಾರ್ಗ ದರ್ಶನದಲ್ಲಿ ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಎದುರುಗಡೆ ನಡೆದ ವಂಡ್ಸೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ 10ನೇ ವರ್ಷದ ವಾರ್ಷಿಕೋತ್ಸವ ವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಧ.ಗ್ರಾ. ಯೋಜನೆಯ ಮೂಲ ಆಶಯ ಪ್ರಗತಿ. ಆಸಕ್ತಿಯಿಂದ ಕೆಲಸ ಮಾಡಿದರೆ ಸಾಧನೆ ಸಾಧ್ಯವಿದೆ. ಸಾಧಿಸುವ ಮನೋಭಾವ ನಮ್ಮಲ್ಲಿ ಜಾಗೃತವಾ ಗಬೇಕು ಎಂದರು.

ವಂಡ್ಸೆ ಒಕ್ಕೂಟದ ಅಧ್ಯಕ್ಷೆ ಜಯಂತಿ ಪಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಂಡ್ಸೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷೆ ಸುಪ್ರೀತಾ ಶೆಟ್ಟಿ, ಕೋಟೇಶ್ವರ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ವಂಡ್ಸೆ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸೋಮಶೇಖರ ಶೆಟ್ಟಿ, ಸದಸ್ಯ ರಾದ ತ್ಯಾಂಪಣ್ಣ ಶೆಟ್ಟಿ, ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ. ಶಿವರಾಮ ಶೆಟ್ಟಿ, ಭಾರತ್‌ ಸಂಚಾರ್‌ ನಿಗಮ್‌ ಇದರ ನಿವೃತ್ತ ಅಭಿಯಂತರ ಶ್ರೀಧರ ಶೆಟ್ಟಿ ಕೊರಾಡಿಮನೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಧ.ಗ್ರಾ. ಯೋಜನೆಯ ತಾಲೂಕು ಯೋಜನಾಧಿಧಿಕಾರಿ ಅಮರಪ್ರಸಾದ್‌ ಶೆಟ್ಟಿ, ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಶ್ರೀ ಚಕ್ರ ಯುವಕ ಮಂಡಲದ ಅಧ್ಯಕ್ಷ ಕರುಣಾಕರ ಶೆಟ್ಟಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಲ್‌.ಎನ್‌. ಆಚಾರ್ಯ, ಎಚ್‌.ಎಂ.ಸಿ. ಫ್ರೆಂಡ್ಸ್‌ ಅಧ್ಯಕ್ಷ ರಫೀಕ್‌ ಸಾಹೇಬ್‌, ಸಿ.ಎ. ಬ್ಯಾಂಕ್‌ ಮಾಜಿ ನಿರ್ದೇಶಕ ಗೋಪಾಲ ಶೆಟ್ಟಿ ಕೊಳ್ತಾ, ಶ್ರೀ ಮಹಾಗಣಪತಿ ರಿûಾ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಆನಂದ ನಾಯ್ಕ ಸೀತಾ-ಗೀತಾ, ವಲಯ ಮೇಲ್ವಿಚಾರಕ ನಾಗರಾಜ, ಸೇವಾ ಪ್ರತಿ ನಿಧಿ ಲಾಲಿ ಸೋಜನ್‌ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಸುರೇಶ ಗಾಣಿಗ, ವಾಸು ಜಿ.ನಾಯ್ಕ, ಆನಂದ ನಾಯ್ಕ, ಗಿರೀಶ್‌ ನಾಯ್ಕ, ಶಂಕರ ಆಚಾರ್ಯ ಹಾಗೂ ಹಾಲಿ ಅಧ್ಯಕ್ಷರಾದ ಜಯಂತಿ ಪಿ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ರಾಘವೇಂದ್ರ ಸ್ವಾಗತಿಸಿದರು. ವಂಡ್ಸೆ ವಲಯ ಮೇಲ್ವಿಚಾರಕ ನಾಗರಾಜ ವರದಿ ಮಂಡಿಸಿದರು. ಮಾಜಿ ಅಧ್ಯಕ್ಷ ವಾಸು ಜಿ. ನಾಯ್ಕ ಕಾರ್ಯಕ್ರಮ ನಿರ್ವಹಿಸಿ, ಸಲ್ಮಾ ವಂದಿಸಿದರು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com