ಮನೆಗೆ ಮರಳಿದಳು ಕಾಣಿಯಾಗಿದ್ದ ಮದುಮಗಳುಬೈಂದೂರು: ಎಪ್ರಿಲ್ 30ರಂದು ಕಾಣೆಯಾಗಿದ್ದ ಶಿರೂರು ಗ್ರಾಮದ ದೊಂಬೆಯ ಪಡಿಯಾರಹಿತ್ಲುವಿನ ಯುವತಿ ಮಮತಾ (24) ಬೈಂದೂರು ಪೊಲೀಸರ ಕಾರ್ಯಾಚರಣೆಯ ವೇಳೆ ಭಟ್ಕಳದಲ್ಲಿ ಪತ್ತೆಯಾಗಿದ್ದು, ಆಕೆಯ ಸಮ್ಮತಿಯ ಮೇರೆಗೆ ಮನೆಗೆ ಪೋಷಕರೊಂದಿಗೆ ಕಳುಹಿಸಿಕೊಡಲಾಗಿದೆ. ಅಂತೂ ಕಳೆದ ಮೂರು ದಿನಗಳಿಂದ ಬಾರಿ ಸುದ್ದಿಯಲ್ಲಿದ್ದ ಪ್ರಕರಣಕ್ಕೊಂದು ಅಂತ್ಯ ದೊರಕಿದಂತಾಗಿದೆ.

ಕರೆಯ ಜಾಡು ಹಿಡುದು ಪತ್ತೆ
ಎಪ್ರಿಲ್ 30ಕ್ಕೆ ಮನೆಯಿಂದ ಕಾಣೆಯಾದ್ದ ಮಮತಾ ಭಟ್ಕಳದ ಸ್ನೇಹಿತೆಯ ಮನೆಯೊಂದರಲ್ಲಿ ಊಳಿದುಕೊಂಡಿದ್ದಳು. ಇದು ತಿಳಿದದ್ದು ಆಕೆ ಮಾಡಿದ್ದ ಒಂದು ಪೋನ್ ಕರೆಯ ಮೂಲಕ. ಭಟ್ಕಳದ ತಾನು ಊಳಿದುಕೊಂಡಿದ್ದ ಸ್ನೇಹಿತೆಯ ಮನೆಯ ಹತ್ತಿರದ ಕಾಯಿನ್ ಬಾಕ್ಸ್ ನಿಂದ ಶಿರೂರಿನ ತನ್ನ ಮನೆಯಲ್ಲಿನ ಸ್ಥಿರ ದೂರವಾಣಿಗೆ ಎಪ್ರಿಲ್ 2ನೇ ತಾರೀಕಿನ ಬೆಳಿಗ್ಗೆ ಕರೆ ಮಾಡಿದ್ದಳು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕರೆಯ ಜಾಡು ಹಿಡಿದು ಹೊರಟು, ಆಕೆ ತಂಗಿದ್ದ ಜಾಗವನ್ನು ಪತ್ತೆಹಚ್ಚಿದ್ದಾರೆ. 

ನಿಗದಿಯಾಗಿದ್ದ ಹುಡುಗನಿಗೆ ಬೇರೆ ಮದುವೆಯಾಯ್ತು
ಮಮತಾಳೊಂದಿಗೆ ಮದುವೆ ನಿಗದಿಯಾಗಿದ್ದ ವರನಿಗೆ ಮೇ.3ರ ಪೂರ್ವನಿಗದಿತ ಮುಹೂರ್ತದಲ್ಲಿಯೇ ಬೇರೊಬ್ಬ ಯುವತಿಯೊಂದಿಗೆ ಮದುವೆಯಾಗಿದೆ. ಮಮತಾಳ ಪ್ರೇಮ ಪ್ರಕರಣ ಠಾಣೆಯ ಮೆಟ್ಟಿಲೇರುತ್ತಿದ್ದಂತೆ ಮದುವೆ ನಿಶ್ಚಯವಾದ ಹಡುಗ ಮದುವೆಯಾಗಲು ನಿರಾಕರಿಸಿದ್ದ. ಅಷ್ಟರಲ್ಲಿಯೇ ಈಕೆಯೂ ನಾಪತ್ತೆಯಾಗಿದ್ದಳು.

ಬೈಂದೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ:
ಎ.28ರಂದು ಪ್ರೇಮ ಪ್ರಕರಣ ಠಾಣೆಯ ಮೆಟ್ಟಿಲೇರಿದಾಗಲೇ ಬುದ್ಧಿವಾದ ಹೇಳಿ ಕಳುಹಿಸಿದ್ದ ಪೊಲೀಸರು ಆಕೆಯ ಬಗ್ಗೆ ಜಾಗೃತೆ ವಹಿಸುವಂತೆ ಮನೆಯವರಿಗೂ ಎಚ್ಚರಿಸಿದ್ದರು. ಆದರೆ ಯುವತಿ ಮೇ.1ರಂದು ನಾಪತ್ತೆಯಾದದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಪ್ರಕರಣದಲ್ಲಿ ಅನ್ಯಕೋಮಿನ ಯುವಕನಾಗಿರುವ ಪ್ರಿಯಕರನ ಪಾತ್ರವಿತ್ತೆನ್ನುವ ಅಂಶ ಮತ್ತಷ್ಟು ಸಂಕಟಕ್ಕೀಡು ಮಾಡಿತ್ತು. ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಕೂಡಲೇ ಕಾರ್ಯಪ್ರವೃತ್ತರಾದ ವೃತ್ತನಿರೀಕ್ಷಕ ಸುದರ್ಶನ್ ಹಾಗೂ ಉಪನಿರೀಕ್ಷರ ಸಂತೋಷ್ ಕಾಯ್ಕಿಣಿ ಅವರ ತಂಡ ಅವಿರತವಾಗಿ ವಿವಿಧ ಹಂತಗಳಲ್ಲಿ ತನಿಕೆ ನಡೆಸಿ ಕೊನೆಗೂ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com