ಕಪ್ಪು ಹಣದ ಚೆಕ್ ವಿತರಣೆಯ ಅಣಕು ಕಾರ್ಯಕ್ರಮ

ಕಪ್ಪು ಹಣದ ಕುರಿತು ಮತದಾರರನ್ನು ವಂಚಿಸಿದಕ್ಕಾಗಿ ಬಿಜೆಪಿ ನಾಯಕರು ಜನತೆಯ ಕ್ಷಮೆ ಕೇಳಲಿ : ಮಲ್ಯಾಡಿ
ಕುಂದಾಪುರ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ  ಸ್ವಿಸ್ ಬ್ಯಾಂಕ್‌ನಲ್ಲಿರುವ ಲಕ್ಷಾಂತರ ಕೋಟಿ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ಸು ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗೆ ತಲಾ 15ಲಕ್ಷ ರೂಪಾಯಿ ಹಣವನ್ನು ಜಮಾ ಮಾಡುತ್ತೇವೆ ಎಂದು ಕಳೆದ ಲೋಕಸಭಾ ಚುನಾವಣೆಯ ವೇಳೆ ಆಶ್ವಾಸನೆ ನೀಡಿದ್ದರು. ಆದರೆ ಈಗ ಅಧಿಕಾರಕ್ಕೆ ಬಂದು ಬರೋಬ್ಬರಿ 3೦೦ಕ್ಕೂ ಹೆಚ್ಚು ದಿನಗಳು ಕಳೆದರೂ ಬಿಜೆಪಿಗರು ಕಪ್ಪು ಹಣದ ಕುರಿತು ಚಕಾರವೆತ್ತುತ್ತಿಲ್ಲ, ಕಪ್ಪು ಹಣ ತಂದು ಜನರ ಖಾತೆಗೆ  ಜಮಾ ಮಾಡುತ್ತೇವೆ ಎಂದು ಸುಳ್ಳು ಹೇಳುವ ಮೂಲಕ ಬಿಜೆಪಿಗರು ಮತದಾರರನ್ನು ವಂಚಿಸಿದ್ದಾರೆ, ಬಿಜೆಪಿಗರು ತಾವು ಹೇಳಿದ ಪ್ರಕಾರ ಕಪ್ಪು ಹಣವನ್ನು ತಂದು ಮತದಾರರಿಗೆ ಹಂಚಬೇಕು, ಇಲ್ಲವೇ ಓಟಿಗಾಗಿ ಮತದಾರರಲ್ಲಿ ಸುಳ್ಳು ಹೇಳಿ ಮೂರ್ಖರನ್ನಾಗಿಸಿದಕ್ಕಾಗಿ ಈ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದ್ದಾರೆ.
ಅವರು ಇಂದು ಕುಂದಾಪುರದಲ್ಲಿ ನಡೆದ ಕಪ್ಪು ಹಣದ ಚೆಕ್ ವಿತರಣೆಯ ಅಣಕು ಕಾರ್ಯಕ್ರಮವನ್ನು ಭಾಗವಹಿಸಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಕುಂದಾಪುರ ನಗರ ಪ್ರಾಧಿಕಾರದ ಅಧ್ಯಕ್ಷ ಜಾಕೋಬ್ ಡಿಸೋಜ, ಕಾಂಗ್ರೆಸ್ ಐಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ನಾವುಂದ, ಕಾಂಗ್ರೆಸ್ ಐಟಿ ಸೆಲ್  ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ನಗರ ಕಾಂಗ್ರೇಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ, ಪುರಸಭಾ ಸದಸ್ಯರಾದ ಶಕುಂತಲಾ ಗುಲ್ವಾಡಿ, ಶ್ರೀಧರ ಶೇರೆಗಾರ, ಜ್ಯೋತಿ ಕೋಡಿ, ನಾಮನಿರ್ದೇಶಿತ ಸದಸ್ಯರಾದ ದೇವಕಿ ಸಣ್ಣಯ್ಯ, ಶಿವರಾಮ ಪುತ್ರನ್, ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಶಿವಾನಂದ, ಮಾಜಿ ಪುರಸಭಾ ಸದಸ್ಯರಾದ ಕೆ.ಜಿ.ನಿತ್ಯಾನಂದ, ವೆಂಕಟೇಶ ಗುಲ್ವಾಡಿ, ಅಬ್ದುಲ್ಲಾ ಕೋಡಿ, ಕುಂದಾಪುರ ವಿಧಾನಸಭಾ ಕ್ಷೇತ್ರ ಐಟಿ ಸೆಲ್ ಪ್ರಮುಖರಾದ ಶ್ರೀಧರ ಆಚಾರ್ಯ, ಪ್ರತೀಕ್ ಶೆಟ್ಟಿ, ಸುನಿಲ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com