ನಾಗಮಂಡಲ ನಾಟಕಕ್ಕೆ ನಿಷೇದ: ಕುಂದಾಪುರ ಸಮುದಾಯ ಖಂಡನೆ

ಕುಂದಾಪುರ: ಮಣಿಪಾಲದ ನರಸಿಂಹ ದೇವಸ್ಥಾನದಲ್ಲಿ ರಂಗಭೂಮಿ ಉಡುಪಿ ಇವರು ಪ್ರದರ್ಶಿಸಬೇಕಾಗಿದ್ದ ಗಿರೀಶ ಕಾರ್ನಾಡರ ‘ನಾಗಮಂಡಲ’ ನಾಟಕವನ್ನು ದೇವಸ್ಥಾನ ಸಮಿತಿಯವರು ಕೊನೇ ಗಳಿಗೆಯಲ್ಲಿ ರದ್ದುಪಡಿಸಿರುವುದನ್ನು ಸಮುದಾಯ ಸಾಂಸ್ಕೃತಿಕ ಸಂಘಟನೆಯ ಕುಂದಾಪುರ ಘಟಕವು ಖಂಡಿಸುತ್ತದೆ. 
    ಗೋಮಾಂಸ ಭಕ್ಷಣೆ ಮತ್ತು ಆಹಾರದ ಆಯ್ಕೆಯ ಸ್ವಾತಂತ್ರ್ಯದ ಕುರಿತು ಗಿರೀಶ್ ಕಾರ್ನಾಡರು ಹೊಂದಿರುವ ನಿಲುವಿಗೂ ಅವರ ಸಾಹಿತ್ಯಕೃತಿಗಳ ಓದು ಮತ್ತು ಆಸ್ವಾದನೆಗೂ ತಳಕು ಹಾಕುವುದು ಸರಿಯಲ್ಲ. ಗಿರೀಶ್ ಕಾರ್ನಾಡರ ನಿಲುವನ್ನು ಒಪ್ಪುವ ಅಥವಾ ಒಪ್ಪದಿರುವ  ಸ್ವಾತಂತ್ರ್ಯ ದೇವಸ್ಥಾನ ಸಮಿತಿಯರಿಗಿದೆ. ಆದರೆ, ಅವರ ಕೃತಿಯನ್ನಾಧರಿಸಿದ ನಾಟಕವನ್ನು ನಿಷೇಧಿಸುವ ಮೂಲಕ ಸಾಂಸ್ಕೃತಿಕ ಪಾಳೆಗಾರಿಕೆಯನ್ನು ಪ್ರದರ್ಶಿಸಿರುವುದು ಈ ದೇಶದ ಸಂವಿಧಾನಕ್ಕೆ ಬಗೆದ ಅಗೌವರವವಾಗಿದೆ. ನಾಗಮಂಡಲವೂ ಸೇರಿದಂತೆ ಗಿರೀಶ ಕಾರ್ನಾಡರ ನಾಟಕಗಳು ಈ ದೇಶದ ರಂಗಭೂಮಿಗೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ನೀಡಿರುವ ಕೊಡುಗೆ ದೊಡ್ಡದು. ಈ ನಿಷೇದವು ಗಿರಿಶ್ ಕಾರ್ನಾಡರು ಮತ್ತು ಅವರ ಕೃತಿಗಳಿಗಾದ ಅವಮಾನವಲ್ಲ, ಇದು ಈ ದೇಶದ ಸಾಂಸ್ಕೃತಿಕ ಹೆಚ್ಚುಗಾರಿಕೆಗೆ ಆದ ಅವಮಾನ. ಅಲ್ಲದೆ, ಈ ನಿಷೇದವು ದೇಶದ ಜನರ ಆಹಾರದ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮತ್ತು ಅವರನ್ನು ಸಾಂಸ್ಕೃತಿಕ ಜೀತದಾಳುಗಳನ್ನಾಗಿಸುವ ಪ್ರಯತ್ನವಾಗಿದೆ ಎಂದು ಸಮುದಾಯ ಸಾಂಸ್ಕೃತಿಕ ಸಂಘಟನೆಯ ಕುಂದಾಪುರ ಘಟಕವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com