ರಿದಂ ನೃತ್ಯ ಶಾಲೆಯ 14ನೇ ವಾರ್ಷಿಕೋತ್ಸವ

ಬೈಂದೂರು: ಲಾವಣ್ಯದ ಅಂಗಸಂಸ್ಥೆ ರಿದಂ ನೃತ್ಯ ಶಾಲೆಯ 14ನೇ ವರ್ಷದ ವಾರ್ಷಿಕೋತ್ಸವ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ರಂಗಕರ್ಮಿ ಬಿ. ಗಣೇಶ ಕಾರಂತ್ ಮಾತನಾಡಿ, ಪಠ್ಯ ಮಕ್ಕಳಲ್ಲಿ ವಿವೇಕವನ್ನು ಹೆಚ್ಚಿಸಿದರೇ, ಪಠ್ಯೇತರ ಚಟುವಟಿಕೆಗಳು ಲೋಕಜ್ಞಾನ ನೀಡುತ್ತದೆ. ಮಕ್ಕಳನ್ನು ಪಠ್ಯೇತರವಾಗಿಯೂ ಹೆಚ್ಚು ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟು ಅವರಲ್ಲಿ ಚಿಂತನಾ ಕ್ರಮವನ್ನು ಹೆಚ್ಚಿಸಬೇಕು ಎಂದರು.

ಲಾವಣ್ಯ ಅಧ್ಯಕ್ಷ ಯೋಗೀಶ್ ಬಂಕೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಿ.ಜಿ.ಕಮಲೇಶ್, ತಾಪಂ ಮಾಜಿ ಸದಸ್ಯ ಸದಾಶಿವ ಡಿ. ಪಡುವರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಲಾವಣ್ಯ ಗೌರವಾಧ್ಯಕ್ಷ ಬಿ. ರಾಮ ಟೈಲರ್‌ರನ್ನು ಗೌರವಿಸಿ ಸನ್ಮಾನಿಸಲಾಯಿತು. ನೃತ್ಯ ಶಾಲೆಯ ಸಂಚಾಲಕ ನಾಗೇಂದ್ರ ಕುಮಾರ್ ಬಂಕೇಶ್ವರ್ ಸ್ವಾಗತಿಸಿ, ಯದುರಾಜ್ ವಂದಿಸಿದರು. ಉದಯ್ ಆಚಾರ್ ನಿರೂಪಿಸಿದರು.

ಸಭೆಯ ನಂತರ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಹಾಗೂ ರಾಜಾಯದು ತಂಡದವರಿಂದ ಸಂಗೀತ ರಸಮಂಜರಿ ನಡೆಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com