ದೈವ ಸಾಕ್ಷಾತ್ಕಾರದ ಅನುಭವ ಸಾಧ್ಯ: ಡಾ. ವಿದ್ಯಾರಣ್ಯ ಭಾರತೀ ಸ್ವಾಮೀಜಿ

ಮರವಂತೆ: ಕಲಿಯುಗದಲ್ಲಿ ಮನುಷ್ಯರಿಗೆ ದೇವರ ಪ್ರತ್ಯಕ್ಷ  ದರ್ಶನ ಅಲಭ್ಯ. ಆದರೆ ದೇವರ ಸಾಕ್ಷಾತ್ಕಾರದ ಅನುಭವ ಪಡೆಯುವುದು ಸಾಧ್ಯ ಎಂದು ಶಿವಮೊಗ್ಗ ಜಿಲ್ಲೆಯ ಕೂಡಲಿ-ಶೃಂಗೇರಿ ಮಹಾ ಸಂಸ್ಥಾನದ ಡಾ. ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಹೇಳಿದರು. 

ಮರವಂತೆಯ ಮಹಾರಾಜಸ್ವಾಮ ವರಾಹ ದೇವಸ್ಥಾನದಲ್ಲಿ ರವಿವಾರ ಆರಂಭವಾದ ಪುನ:ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಹೋತ್ಸವದ ಮೊದಲ ದಿನದ ಧರ್ಮಸಸಭೆಯನ್ನು ಅವರು ಉದ್ಘಾಟಿಸಿದ ಬಳಿಕ ಆಶೀರ್ವಚನಗೈದರು.

ಭಗವದ್ಗೀತೆ ಪರೋಕ್ಷವಾಗಿ ಜೀವನ ಒಂದು ಸಾಧನೆಯ ಮಾರ್ಗ ಎಂದು ತಿಳಿಸುತ್ತದೆ. ಭಕ್ತನಿಗೆ ದೇವರನ್ನು ಅರಿತುಕೊಳ್ಳುವ, ತನ್ನ ಕರ್ಮಮಾರ್ಗವನ್ನು ನಿಷ್ಠೆಯಿಂದ ಅನುಸರಿಸುವ, ಅದರ ಮೂಲಕ ಭಗವಂತನನ್ನು ಕಾಣುವ ತವಕವಿದ್ದರೆ ದೇವರನ್ನು ಸಾಕ್ಷಾತ್ಕರಿಸಿಕೊಂಡ ಅನುಭವ ಆಗುತ್ತದೆ. ಎಲ್ಲರೂ ಆ ಮಾರ್ಗದಲ್ಲಿ ಸಾಗಬೇಕು ಎಂದು ಅವರು ತಿಳಿಸಿದರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ಶಾಸಕ ಕೆ. ಗೋಪಾಲ ಪೂಜಾರಿ, ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಅಧ್ಯಕ್ಷ ನವೀನಚಂದ್ರ ಉಪ್ಪುಂದ, ಗಂಗೊಳ್ಳಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ ಕಾರ್ಯಕ್ರಮಕ್ಕೆ ಯಶಸ್ಸು ಕೋರಿ ಮಾತನಾಡಿದರು. 

ಮಹೋತ್ಸವ ಸಮಿತಿಯ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಶ್ರೀಧರ ಮರವಂತೆ ವಂದಿಸಿದರು. ರಾಘವೇಂದರ ಕಾಂಚನ್ ನಿರೂಪಿಸಿದರು. ಬೈಂದೂರು ನಾಡದೋಣಿ ಮೀನುಗಾರರಸಂಘದ ಅಧಯಕ್ಷ ಕುಮಾರ ಖಾರ್ವಿ, ಉದ್ಯಮಿಗಳಾದ ಪಡುಕೋಣೆ ನರಸಿಂಹ ಪೂಜಾರಿ, ಎಂ. ಎಸ್. ಶೇಷ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಶಾರದಾ ಡಿ. ಬಿಜೂರು, ಮೀನುಗಾರ ಮುಖಂಡರಾದ ಎಂ. ಸುಬ್ಬ ಖಾರ್ವಿ, ಕೇಶವ ಖಾರ್ವಿ, ಸೋಮಯ್ಯ ಖಾರ್ವಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com