ಮಕ್ಕಳಿಗೆ ಸಂಸ್ಕಾರ ನೀಡುವವಳು ತಾಯಿ: ಮಂಗಳಾ ಚೈತನ್ಯಜೀ

ಮರವಂತೆ: ನಮ್ಮ ಮುಂದೆ ಆಯ್ಕೆಗೆ ಹಲವು ವಸ್ತು, ವಿಚಾರಗಳವೆ. ಮಕ್ಕಳಿಗೆ ಸಂಸ್ಕಾರ ನೀಡಬೇಕಾದವಳು ತಾಯಿಯಾದ್ದರಿಂದ ಅವಳು ಅಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳನ್ನು ಬೆಳೆಸಿದರೆ ಅವರು ಸಮಾಜಕ್ಕೆ ಬೆಳಕು ನೀಡುವವರಾಗುತ್ತಾರೆ. ದೇವರ ಮೇಲಿನ ಭಕ್ತಿಯಿಂದ ನಮಗೆ ಪ್ರೇರಣೆ ದೊರೆಯುತ್ತದೆ. ಪುರುಷಾರ್ಥಗಳಲ್ಲಿ ಮೊದಲಿನದಾದ ಧರ್ಮವನ್ನು ಅನುಸರಿಸಿದರೆ ಉಳಿದುದೆಲ್ಲ ತಾವಾಗಿ ಬರುತ್ತವೆ ಎಂದು ಮಂಗಳೂರಿನ ಮಾತಾ ಅಮೃತಾನಂದಮಯಿ ಆಶ್ರಮದ ಬ್ರಹ್ಮಚಾರಿಣಿ ಮಂಗಳಾ ಚೈತನ್ಯಜೀ ಹೇಳಿದರು. 

ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಅಷ್ಟಬಂಧ ಪುನ:ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ನಡೆದ ಮಹಿಳಾ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. 

  ಶ್ರೀಕ್ಷೇತ್ರ ಹೊರನಾಡಿನ ರಾಜಲಕ್ಷ್ಮೀ ಜಿ. ಜೋಷಿ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಉಪನ್ಯಾಸ ನೀಡಿದ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಡಾ. ಶುಭಾ ಮರವಂತೆ  ಹೆಣ್ಣು ಪರಾವಲಂಬಿ, ಆರ್ಥಿಕವಾಗಿ ದುರ್ಬಲಳು ಎನ್ನುವ ಕಾಲ ಇದಲ್ಲ. ಅವಳು ಬದುಕಿನಲ್ಲಿ ಹೊಂದಾಣಿಕೆ ಮಾಡಿಕೊಂಡು ಅವಕಾಶಗಳನ್ನು ಬಳಸಿಕೊಂಡು ಸ್ತ್ರೀಶಕ್ತಿಯಾಗಿ ಮೂಡಿಬರುತ್ತಿದ್ದಾಳೆ ಎಂದು ಹೇಳಿದರು. 

  ಶಾರದಾ ಡಿ. ಬಿಜೂರು ಸ್ವಾಗತಿಸಿದರು. ಮಹೋತ್ಸವ ಸಮಿತಿಯ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ವಂದಿಸಿದರು. ಶೈಲಜಾ ನಾಯಕವಾಡಿ ಮತ್ತು ನಾಗರತ್ನ ಸಿ. ನಾಡ ನಿರೂಪಿಸಿದರು. ಕರ್ನಾಟಕ ಬ್ಯಾಂಕ್ ರೀಜನಲ್ ಮೆನೇಜರ್ ವಿದ್ಯಾಲಕ್ಷ್ಮೀ, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಲ್ಲೂಕು ಪಂಚಾಯತ್ ಸದಸ್ಯೆ ಶಾರದಾ ಶೇಖರ್ ದೇವಾಡಿಗ, ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಎ. ಸುಗುಣಾ, ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ನಾಯಕ್, ನಾವುಂದ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ವಿನಯಾ ಕೆ, ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀಮತಿ ಆಚಾರ್ಯ, ಗುಲಾಬಿ ಮೊಗವೀರ ಅತಿಥಿಗಳಾಗಿದ್ದರು. 

  ಸಭೆಯ ಬಳಿಕ ನಡೆದ ಮಹಿಳಾ ಉತ್ಸವದಲ್ಲಿ ಖ್ಯಾತನಾಮ ಮಹಿಳಾ ಕಲಾವಿದರಿಂದ ನೃತ್ಯ, ಗಾನ, ಯಕ್ಷಗಾನ ಪ್ರದರ್ಶನ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com