ವರಾಹ ಮೀನುಗಾರರ ಆರಾಧ್ಯ ದೇವರು: ಆನಂದ ಸಿ. ಕುಂದರ್

ಮರವಂತೆ: ಮರವಂತೆಯ ಕಡಲತೀರದಲ್ಲಿರುವ ವರಾಹ ದೇವರು ಉಡುಪಿ ಜಿಲ್ಲೆಯ ಎಲ್ಲ ಮೀನುಗಾರರ ಆರಾಧ್ಯ ದೇವರು. ಮೀನುಗಾರರು ತಮ್ಮ ಉದ್ಯೋಗ, ಬದುಕು, ಸುಖ. ಕಷ್ಟಗಳಿಗೆ ವರಾಹ ಕಾರಣ ಎಂದು ಭಾವಿಸುತ್ತಾರೆ. ಯಾವುದೇ ಕೆಲಸ ಆರಂಭಿಸುವ ಮೊದಲು ಅವರು ಪ್ರಾರ್ಥಿಸುವುದು ವರಾಹನನ್ನು. ಅದರ ದ್ಯೋತಕವಾಗಿಯೇ ಇಲ್ಲಿ ನಡೆಯುತ್ತಿರುವ ಪ್ರಸಕ್ತ ಮಹೋತ್ಸದಲ್ಲಿ ಅವರು ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ ಎಂದು ಕೋಟದ ಮತ್ಸ್ಯೋದ್ಯಮಿ ಆನಂದ ಸಿ. ಕುಂದರ್ ಹೇಳಿದರು. 

   ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನ:ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಮಹೋತ್ಸವ ಸಮಾರಂಭದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
   ಮಹೋತ್ಸವ ಸಮಿತಿಯ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಭಾಸ್ಕರ ಹೆಬ್ಬಾರ್ ವಂದಿಸಿದರು. ಸಂಜೀವ ಹೊಸಾಡು ನಿರೂಪಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಮುಂಬೈ ಉದ್ಯಮಿಗಳಾದ ಸುರೇಶ ಡಿ. ಪಡುಕೋಣೆ, ವಿಜಯಕೃಷ್ಣ ಪಡುಕೋಣೆ, ಪೊಲೀಸ್ ಇಲಾಖೆಯ ಅಧಿಕಾರಿ ಕೆ. ಶಂಕರ ಹೆಬ್ಬಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂ. ವಿನಾಯಕರಾವ್, ಎಸ್. ಜನಾರ್ದನ, ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಎಂ. ಶ್ರೀಧರ ರಾವ್,  ಮೀನುಗಾರ ಸೇವಾ ಸಮಿತಿಯ ಅಧ್ಯಕ್ಷ ವೆಂಕಟರಮಣ ಖಾರ್ವಿ, ಸುಧಾಕರ ಆಚಾರ್ಯ ತ್ರಾಸಿ, ರಾಮ ಖಾರ್ವಿ ನಾವುಂದ, ರಾಮಕೃಷ್ಣ ಗಾಣದಡಿ, ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಎಂ. ರತ್ನಾಕರ ಹೆಬ್ಬಾರ್, ನರಸಿಂಹ ಖಾರ್ವಿ, ರಾಮದಾಸ ಕಂಚುಗೋಡು ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com