ನದಿ ದಂಡೆ ಸಂರಕ್ಷಣಾ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು

ಕುಂದಾಪುರ: ಮುಳ್ಳಿಕಟ್ಟೆ ಸಮೀಪದ ಹೊಸಾಡು ಗ್ರಾಮದ ತೆಂಕಬೈಲು ಅರಾಟೆ ಎಂಬಲ್ಲಿ ಉಪ್ಪುನೀರಿನ ತಡೆಗೋಡೆ ಹಾಗೂ ನದಿದಂಡೆ ಸಂರಕ್ಷಣಾ ಕಾಮಗಾರಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಚಾಲನೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಗೋಪಾಲ ಪೂಜಾರಿ, ಸುಮಾರು ೯೦ ಲಕ್ಷ ಅಂದಾಜು ಮೊತ್ತದ ಈ ಕಾಮಗಾರಿ ಉಪ್ಪು ನೀರು ತಡೆಯಲು ಹಾಗೂ ನದಿದಂಡೆ ಸಂರಕ್ಷಣೆಗೆ ಸಂವಂಧಿಸಿದ ಕಾಮಗಾರಿಯಾಗಿದ್ದು ಈ ಭಾಗದಲ್ಲಿ ೨ ಸಣ್ಣ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಲಿದೆ. ಅಲ್ಲದೇ ಬೈಂದೂರು ವಿಧಾನ ಸಭಾ ಕ್ಷೇತ್ರದ ವಿವಿಧೇಡೆಗಳಲ್ಲಿ ಕೃಷಿಗೆ ಅನುಕೂಲವಾಗುವಂತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ ಎಂದರು.

 ಈ ಸಂದರ್ಭ ಗುತ್ತಿಗೆದಾರ ಗಣೇಶ್ ಪುತ್ರನ್, ಕಾಂಗ್ರೆಸ್ ಮುಖಂಡ ರಾಜು ದೇವಾಡಿಗ ಮೊದಲಾದವರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com