ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಮತ್ತೆ ಬೆದರಿಕೆಯ ಕರೆ

ಕುಂದಾಪುರ: ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಮತ್ತೆ ಭೂಗತ ಪಾತಕಿ ರವಿ ಪೂಜಾರಿಯಿಂದ  ಬೆದರಿಕೆಯ ಕರೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ಇಂದು ಮಧ್ಯಾಹ್ನ 12:35ರ ಸುಮಾರಿಗೆ ಕರೆ ಮಾಡಿದಾಗ ವ್ಯಕ್ತಿಯು ಶಾಸಕ ಹಾಲಾಡಿಯ ಬಳಿ ಮಾತನಾಡಬೇಕೆಂದು ತಿಳಿಸಿದ್ದಾನೆ. ಆದರೆ ಶಾಸಕರು ಬೇರೊಂದು ಮೀಟಿಂಗ್ ನಲ್ಲಿದ್ದುದರಿಂದ ಮತ್ತೆ ಕರೆ ಮಾಡಲು ಸೂಚಿಸಿದ್ದಾರೆ. ಅಲ್ಲಿಗೆ ಕರೆಯನ್ನು ಕಟ್ ಮಾಡಿದ ವ್ಯಕ್ತಿಯು ಮತ್ತೆ ಮಿಸ್ ಕಾಲ್ ನೀಡಿದ್ದಾನೆ ಎನ್ನಲಾಗಿದೆ. 

ನಿನ್ನೆ ಮಧ್ಯಾಹ್ನ ಶಾಸಕರು ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಹೊರಟ್ಟಿದ್ದ ವೇಳೆ ಕರೆ ಮಾಡಿದ್ದ ವ್ಯಕ್ತಿಯು ತನಗೆ 10ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಅದರೆ ಹಣ ನೀಡಲು ಶಾಸಕರು ನಿರಾಕರಿಸಿದ್ದರು. ಆದರೆ 3 ದಿನದೊಳಗೆ ಹಣ ನೀಡುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಬೇಕು ಇಲ್ಲದಿದ್ದರೆ ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿದ್ದ. 

ಉಡುಪಿ ಎಸ್ಪಿ ಇಂದು ಶಾಸಕರ ಮನೆಗೆ ಭೇಟಿ ನೀಡಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಅಣ್ಣಾಮಲೈ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಶಾಸಕರಿಗೆ ಭದ್ರತೆ ಒದಗಿಸಲಾಗಿದೆ. ಕರೆ ಮಾಡಲಾಗಿರುವ ಮೊಬೈಲ್ ಸಂಖ್ಯೆಯು ಬ್ಯಾಂಕಾಕ್ ನಿಂದ ಬಂದಿರುವುದು ತಿಳಿದುಬಂದಿದೆ. ಇದು ರವಿ ಪೂಜಾರಿಯ ಕೃತ್ಯವೆ ಇಲ್ಲ ಬೇರೆ ಯಾರಾದರೂ ಭಾಗಿಯಾಗಿದ್ದಾರಾ ಎಂಬ ಬಗ್ಗೆ ತನಿಕೆ ನಡೆಸಲಾಗುತ್ತಿದೆ. ಬೇರೆ ಯಾರಿಗಾದರೂ ಇಂತಹ ಕರೆಗಳು ಬಂದಿದ್ದರೆ ತಕ್ಷಣ ದೂರ ನೀಡಿ ಎಂದಿದ್ದಾರೆ.

ಇದನ್ನೂ ಓದಿ >> ಹಾಲಾಡಿ ಶ್ರೀನಿವಾಸ ಶೆಟ್ರಿಗೆ, ರವಿ ಪೂಜಾರಿಯಿಂದ ಬೆದರಿಕೆ ಕರೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com