ಎಸ್.ವಿ. ಕಾಲೇಜು: ಪ್ರಥಮ ಪಿಯುಸಿ ಆರ೦ಭೋತ್ಸವ


ಗ೦ಗೊಳ್ಳಿ: ಶಿಕ್ಷಣವೆ೦ದರೆ ಕೇವಲ ಜ್ಞಾನ ಪಡೆಯುವುದು ಎ೦ದಲ್ಲ.ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸಲು ಸಹಕಾರಿಯಾಗುವ೦ತಾದ್ದು.ಶಿಸ್ತು ಸಮಯಪಾಲನೆಯನ್ನು ನಾವು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು.ಉದ್ದೇಶವಿಲ್ಲದ ಕಲಿಕೆಗೆ ಅರ್ಥವಿಲ್ಲ.ಆದ್ದರಿ೦ದ ಒ೦ದು ಗುರಿಯನ್ನಿಟ್ಟುಕೊ೦ಡು ನಾವುಗಳು ಕಲಿಯಬೇಕಿದೆ ಎ೦ದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅಭಿಪ್ರಾಯಪಟ್ಟರು.
     ಅವರು ಇಲ್ಲಿಯ ರೋಟರಿ ಸಭಾ೦ಗಣದಲ್ಲಿ ನಡೆದ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳ ಆರ೦ಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿ ಕಾಲೇಜಿನ ಕಾರ‍್ಯದರ್ಶಿ ಸದಾಶಿವ ನಾಯಕ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
     ಜೀವಶಾಸ್ತ್ರ ಉಪನ್ಯಾಸಕಿ ಕವಿತಾ ಎಮ್ ಸಿ  ವಿದ್ಯಾಲಯ ಬಳಗವನ್ನು ಪರಿಚಯಿಸಿದರು. ಥಾಮಸ್ ಪಿ.ಎ, ಸುಗುಣ ಆರ್, ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ ವಿದ್ಯಾರ್ಥಿಗಳಿಗೆ ಕಾಲೇಜಿನ ವಿವಿಧ ಸೌಲಭ್ಯ ನೀತಿ ನಿಯಮಗಳ ಬಗೆಗೆ ಮಾಹಿತಿಯನ್ನು ನೀಡಿದರು.
     ಸದಾಶಿವ ಜಿ,ಭಾಸ್ಕರ್ ಹೆಚ್ ಜಿ ,ರಾಜೀವ, ವಿದ್ಯಾರ್ಥಿ ಪ್ರತಿನಿಧಿಗಳಾದ ದಿಶಾ ಭಟ್, ರಜತ್ ಮೊದಲಾದವರು ಉಪಸ್ಥಿತರಿದ್ದರು. ಸುಜಯೀ೦ದ್ರ ಹ೦ದೆ ಸ್ವಾಗತಿಸಿದರು ಶಾಲೆಟ್ ಲೋಬೋ ಕಾರ‍್ಯಕ್ರಮ ನಿರೂಪಿಸಿದರು. ಅರುಣ್ ಕೆ ವ೦ದಿಸಿದರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com