ವಿದ್ಯಾರ್ಥಿ ಸರಕಾರ ಉದ್ಘಾಟನೆ

ಹೆಮ್ಮಾಡಿ: ಇಲ್ಲಿನ ಶ್ರೀ ವಿ.ವಿ.ವಿ.ಮಂಡಳಿ ಆಡಳಿತಕ್ಕೊಳಪಟ್ಟ ಜನತಾ ಪ್ರೌಢಶಾಲೆ ಹೆಮ್ಮಾಡಿ ಇದರ ವಿದ್ಯಾರ್ಥಿ ಸರ್ಕಾರವನ್ನು ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಉದ್ಘಾಟಿಸಿದರು. ಪ್ರಜಾಪ್ರಭುತ್ವದ ಮಾದರಿಯ ಶಾಲಾ ಸರ್ಕಾರವು  ಶಾಲಾ ಹಂತದಲ್ಲಿ  ರಾಜಕೀಯ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಡಲ್ಲಿ  ಭವಿಷ್ಯದಲ್ಲಿ ಉತ್ತಮ ರಾಜಕಾರಣದ ತಳಹದಿಯಾಗುತ್ತದೆ ಎಂದರು. 
    ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ  ಬಿ.ಮೋಹನದಾಸ್ ಶೆಟ್ಟಿ  ವಿದ್ಯಾರ್ಥಿ ಸರ್ಕಾರದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು  ಭೋದಿಸಿದರು. ಆಡಳಿತ ಪಕ್ಷ ಮತ್ತು ವಿರೋದ ಪಕ್ಷದವರು ಪ್ರಾಮಾಣಿಕ ಸೇವೆಯಿಂದ ಉತ್ತಮ ಪ್ರಜಾಪ್ರಭುತ್ವಕ್ಕೆ ಸರ್ಕಾರ ನಿರ್ಮಿಸಲು ಸಾದ್ಯ ಎಂದರು. ಸಭೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕದೆವೇಂದ್ರ ನಾಯಕ್, ಶ್ರೀಮತಿ ಪ್ರವಿತ,
   ಶಾಲೆಯ ಹಿರಿಯ ಶಿಕ್ಷಕರಾದ ದಿನಕರ್ ಎಸ್ ಅವರು ಸ್ವಾಗತಿಸಿದರು. ವಿವಿಧ ಸಂಘಗಳ ಪರಿಚಯವನ್ನು  ಶಿಕ್ಷಕರಾದ ನಾರಾಯಣ ಸ್ವಾಮಿ ವಾಚಿಸಿದರು, ಮಂತ್ರಿ ಮಂಡಲ ಪಟ್ಟಿಯನ್ನು ವಿಠಲ್ ನಾಯ್ಕ  ವಾಚಿಸಿದರು. ಕನ್ನಡ ಭಾಷಾ  ಶಿಕ್ಷಕರಾದ ಜಗದೀಶ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ಅಶೋಕ ಶೆಟ್ಟಿ ವಂದಿಸಿದರು. 


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com