ವಿದ್ಯಾರ್ಥಿ ವೇದಿಕೆ’ಗೆ ರಾಷ್ಟ್ರಪತಿ ಮಾದರಿ ಚುನಾವಣೆ

ಹೆಮ್ಮಾಡಿ ಜನತಾ ಸ್ವತಂತ್ರ ಪ.ಪೂ ಕಾಲೇಜಿನಲ್ಲಿ ‘ವಿದ್ಯಾರ್ಥಿ ವೇದಿಕೆ’ಗೆ ನಡೆದ ಚುನಾವಣೆ

ಕುಂದಾಪುರ: ಹೆಮ್ಮಾಡಿ ಜನತಾ ಸ್ವತಂತ್ರ ಪ.ಪೂ ಕಾಲೇಜಿನಲ್ಲಿ ‘ವಿದ್ಯಾರ್ಥಿ ವೇದಿಕೆ’ಗೆ ರಾಷ್ಟ್ರಪತಿ ಮಾದರಿಯಂತೆ  ಪರೋಕ್ಷ ಚುನಾವಣೆಯ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರನ್ನು ಆರಿಸಲಾಯಿತು.

 ರಾಷ್ಟ್ರಪತಿ ಚುನಾಣೆಯಲ್ಲಿ ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯ, ರಾಜ್ಯದ ಸದಸ್ಯರು, ಕೇಂದ್ರ ಸಂಸತ್ತಿನ ಒಟ್ಟು ಮತಗಳ ನಡುವೆ ಸಮಾನತೆ ಇರುವ ಉದ್ದೇಶದಿಂದ ಪ್ರಾತಿನಿದ್ಯ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಇಲ್ಲಿಯೂ  ಎಲ್ಲಾ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮಾನ ಪ್ರಾತಿನಿಧ್ಯದಂತೆ ತರಗತಿ, ಕ್ರೀಡಾ, ಸಾಹಿತ್ತಿಕ ಪ್ರತಿನಿಧಿಗಳನ್ನು  ಪ್ರತ್ಯಕ್ಷ ಚುನಾವಣೆಯ ಮೂಲಕ ಆರಿಸಿ ಅವರಿಗೆ ಮತದಾನದ ಹಕ್ಕು ನೀಡಲಾಯಿತು. ನಂತರ ತರಗತಿಯ ಕೊನೆಯ ಅವಧಿಯಲ್ಲಿ ನಡೆದ ಪರೋಕ್ಷ ಚುನಾವಣೆಯಲ್ಲಿ ಅಧ್ಯಕ್ಷನಾಗಿ ದ್ವಿತೀಯ ವಾಣಿಜ್ಯ ವಿಭಾಗದ ನಿತೇಶ್ ಉಪಾಧ್ಯಕ್ಷನಾಗಿ  ಪ್ರಥಮ ಕಲಾ ವಿಭಾಗದ ಗೌತಮ ಆಯ್ಕೆಯಾಗಿರುತ್ತಾರೆ.

ಮುಖ್ಯ ಚುನಾವಣೆ ಅಧಿಕಾರಿಯಾಗಿ ಕಾಲೇಜಿನ ಪ್ರಾಂಶುಪಾಲ ಹಾಗೂ ರಾಜಕೀಯ ಶಾಸ್ತ್ರ ಉಪನ್ಯಾಸಕ ಸುಧಾಕರ ವಕ್ವಾಡಿ ಅಧ್ಯಕ್ಷಾಧಿಕಾರಿಯಾಗಿ ಮಂಜುನಾಥ.ಕೆ.ಎಸ್  ಸಹಾಯಕರಾಗಿ  ಮಂಜುನಾಥ ಚಂದನ್, ಗೀತಾ ಜೋಷಿ, ಹರೀಶ್ ಕಾಂಚನ್ ಸಹಕರಿಸಿದರು.

ಒಂದೇ ಅವಧಿಗೆ ತರಗತಿಯ ಎಲ್ಲಾ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಿ ಅಭ್ಯರ್ಥಿಗಳಿಂದ ಪ್ರಚಾರ ನಡೆಸಿದ ನಂತರ ಮತದಾನ ಪ್ರಕ್ರಿಯೆ ಮುಗಿಸಿ  ಐದು ನಿಮಿಷದೊಳಗೆ ಚುನಾವಣೆಯ ಪಲಿತಾಂಶ  ನೀಡಲಾಗುತ್ತದೆ. ರಾಷ್ಟ್ರಪತಿ ಮಾದರಿಯ ಚುನಾವಣೆಯನ್ನು ಕಳೆದ ಎಂಟು ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇವೆ.  ಪಾಠ ಪ್ರವಚನಗಳಿಗೆ  ತೊಂದರೆಯಾಗುವುದಿಲ್ಲ ವಿದ್ಯಾರ್ಥಿಗಳಿಲ್ಲಿ ಗುಂಪುಗಾರಿಕೆ, ಯಾವುದೇ ಗೊಂದಲಗಳಿಗೆ ಆಸ್ಪದೆ ನೀಡದೆ ನಡೆಯುವ ಸರಳ ಚುನಾವಣೆ ಇದು. 
- ಸುಧಾಕರ ವಕ್ವಾಡಿ ಪ್ರಾಂಶುಪಾಲರು

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com