ಇಣುಕಿ ನೋಡಿ ಪೆಟ್ಟು ತಿಂದ ಭೂಪ

ಕೋಟ: ನವ ಜೋಡಿ ಮಲಗಿದ್ದ ಕೋಣೆಯಲ್ಲಿ ಇಣುಕುತ್ತಿದ್ದ ಯುವಕ ಸಿಕ್ಕಿಬಿದ್ದು ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ಸಾಲಿಗ್ರಾಮ ಸಮೀಪ ಬುಧವಾರ ರಾತ್ರಿ ನಡೆದಿದೆ.

ಹೊರಗಡೆ ಶಬ್ಧವಾದಂತಾಗಿ ಮನೆಯವರು ಹೊರ ಬಂದು ನೋಡುವಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಅನಂತರ ಸ್ಥಳೀಯರ ಸಹಕಾರದಿಂದ ಈತನನ್ನು ಹಿಡಿದು ಸರಿಯಾಗಿ ಗೂಸಾ ನೀಡಿ ಪೊಲೀಸರಿಗೊಪ್ಪಿಸಲಾಗಿದೆ. ಈ ಸಂದರ್ಭ ತಾನು ಕೋಟೇಶ್ವರ ಸಮೀಪದ ನಿವಾಸಿಯಾಗಿದ್ದು, ನನಗೆ ವಿವಾಹಿತರು ಮಲಗಿರುವುದನ್ನು ಕದ್ದು ನೋಡುವ ಚಟವಿದ್ದು, ಅದಕ್ಕಾಗಿಯೇ ಕೋಟೇಶ್ವರದಿಂದ ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಆರಂಭದಲ್ಲಿ ಈತ ಕಳ್ಳತನಕ್ಕಾಗಿ ಆಗಮಿಸಿದ್ದಾನೆ ಎಂದು ಸಂಶಯಿಸಿದ್ದು, ಅನಂತರ ಕಿಟಿಕಿಯಲ್ಲಿ ರಂಧ್ರ ಕೊರೆದಿರುವುದನ್ನು ನೋಡಿ ಸಿಸಿ ಕೆಮರಾ ಅಳವಡಿಸಲು ಸಂಚು ರೂಪಿಸಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯ ಅನೇಕ ಮಂದಿ ಹಲವು ದಿನಗಳ ಹಿಂದೆ ನಮಗೂ ಕೂಡ ಇದೇ ರೀತಿಯ ಅನುಭವವಾಗಿದೆ ಎಂದು ತಿಳಿಸಿದ್ದು ಈ ಕುರಿತು ವಿಚಾರಿಸಿದಾಗ, ಹಗಲಿನಲ್ಲಿ ಕೆಲಸ ಮಾಡಿ ರಾತ್ರಿ ಇಂತಹ ಕೃತ್ಯ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈತ ವಿವಾಹಿತನಾಗಿದ್ದು ಮನೆಯವರಿಗೆ ಹಾಗೂ ಪರಿಚಯಸ್ಥರಿಗೆ ಈ ಕೃತ್ಯದ ಕುರಿತು ಆಚ್ಚರಿ ಮೂಡಿದೆ.

ಘಟನೆ ಕುರಿತು ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರ ಮಧ್ಯಸ್ಥಿಕೆಯಲ್ಲಿ ಎಚ್ಚರಿಕೆ ನೀಡಿ ಪ್ರಕರಣ ರಾಜಿಗೊಳಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com