ರಕ್ತದಾನ ಶಿಬಿರ ಆಯೋಜಿಸಿ ಕೊರತೆಯನ್ನು ನೀಗಿಸಿ: ಎಸ್ಪಿ ಅಣ್ಣಮಲೈ

ಕುಂದಾಪುರ: ವಿವಿಧ ಸಂಘ ಸಂಸ್ಥೆಗಳು ಒಟ್ಟಾಗಿ ರಕ್ತದಾನ ಶಿಬಿರಗಳನ್ನು ಆಗಾಗ್ಗೆ ಆಯೋಜಿಸುವುದರಿಂದ ರಕ್ತದ ಕೊರತೆಯನ್ನು ಸುಲಭವಾಗಿ ನೀಗಿಸಬಹುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದರು.

ಅವರು ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕುಂದಾಪುರ, ಗಂಗೊಳ್ಳಿ ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್, ಕರಾವಳಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘ, ಸರ್ವಧರ್ಮ ಸೌಹಾರ್ದ ಸಮ್ಮೀಲನ ವೇದಿಕೆ, ಉಡುಪಿ ಜಿಲ್ಲಾ ರಕ್ತನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದರು.
ವಿವಿಧ ಕಾಲೇಜುಗಳ ಸಹಭಾಗಿತ್ವದೊಂದಿಗೆ ಈ ಶಿಬಿರ ಆಯೋಜನೆಗೊಂಡಿರುವುದು ಶ್ಲಾಘನಾರ್ಹ. ಇಂತಹ ಸಮಾಜ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ನುಡಿದರು.

ಕುಂದಾಪುರದ ವೈದ್ಯಾಧಿಕಾರಿ ಡಾ. ಉದಯಶಂಕರ ಎ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಮುಖ್ಯ ಅಥಿತಿಗಳಾಗಿ ಉದ್ಯಮಿ ಜನಾಬ್ ಎಂ. ಎಂ. ಇಬ್ರಾಹಿಂ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಮಣ್ಯ ಶೇರುಗಾರ್, ನ್ಯೂ ಮೆಡಿಕಲ್ ಸೆಂಟರ್ ನ ನಿರ್ದೇಶಕ ಡಾ. ರಂಜನ್ ಆರ್. ಶೆಟ್ಟಿ, ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ, ಕರಾವಳಿ ಸ್ವಯಂಪ್ರೇರಿತ ರಕ್ತದಾನ ಸಂಘ ಗಂಗೊಳ್ಳಿ ಇದರ ಅಧ್ಯಕ್ಷ ದಿವಾಕರ ಎನ್. ಖಾರ್ವಿ, ಜಟ್ಟಿಗೇಶ್ವರ ಯೂತ್ ಕ್ಲಬ್ ಅಧ್ಯಕ್ಷ ನಾಗರಾಜ ಖಾರ್ವಿ, ಸರ್ವಧರ್ಮ ಸೌಹಾರ್ದ ಸಮ್ಮಿಲನ ವೇದಿಕೆ ಗಂಗೊಳ್ಳಿ ಇದರ ಸಂಚಾಲಕ ಕೆ.ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು. 
ಇದೇ ಸಂದರ್ಭದಲ್ಲಿ ಅತೀ ಹೆಚ್ಚು ರಕ್ತ ದಾನ ಮಾಡಿದ ವಿದ್ಯಾರ್ಥಿಗಳಾದ ಬಿ.ಬಿ.ಹೆಗ್ಡೆ ಕಾಲೇಜಿನ ಕಾರ್ತಿಕ್ ಕಿಣಿ, ಭಂಡಾರ್‌ಕಾರ‍್ಸ್ ಕಾಲೇಜಿನ ಸುಮಂತ್, ಶಾರದಾ ಕಾಲಜು ಬಸ್ರೂರು ಇದರ ಸಚಿನ್ ಶೆಟ್ಟಿ, ಕೋಟೇಶ್ವರ ಸ.ಪ್ರ.ದರ್ಜೆ ಕಾಲೇಜು ನಯನ ಪೂಜಾರಿ, ಶಂಕರನಾರಾಯಣ ಸ.ಪ್ರ.ದ,ಕಾಲೇಜಿನ ಧನುಷ್ ಕುಮಾರ್, ಪತ್ರಿಕಾ ಮತ್ತು ಮಾಧ್ಯಮದ ವರದಿಗಾರರಾದ ಉದಯ ಟಿವಿಯ ಗಣೇಶ್ ಎನ್, ಅಮೀನ್, ವಾರ್ತಾಭಾರತಿ ವರದಿಗಾರ ಮಹಮ್ಮದ್ ಶರೀಫ್, ವಿಜಯವಾಣಿ ಉಡುಪಿಯ ಜನಾರ್ಧನ ಕೊಡವೂರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಉಡುಪಿಯ ಅನಿಲ್ ಕುಮಾರ್ ಎಂ ರಾವ್, ಕಾರ್ಕಳ ಠಾಣೆಯ ಪ್ರೇಂಕುಮಾರ್, ಶಂಕರನಾರಾಯಣ ಎಎಸೈ ಶುಭಕರ, ಎಸ್ಪಿ ಕಚೇರಿಯ ಸಿಪಿಸಿ ಶಿವಾನಂದ, ಸರ್ಕಾರೀ ನೌಕರರಾದ ಬ್ರಹ್ಮಾವರ ಖಜಾನಾಧಿಕಾರಿ ಮಾಧವ ಹೆಗ್ಡೆ, ಕಿರಿಮಂಜೇಶ್ವರ ಪಿಡಿಓ ಚಂದ್ರಕಾಂತ ಬಿ, ಉಡುಪಿ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರ ಅಶೋಕ್, ಸುಬ್ರಹ್ಮಣ್ಯ ಶೇರುಗಾರ್, ವಕೀಲರಾದ ಶ್ಯಾಂ ಸುಂದರ ನಾಯರಿ ಕೋಟ, ರಾಘವೇಂದ್ರ ಚರಣ ನಾವಡ, ಸಾರ್ವಜನಿಕರಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ರಾಜೇಶ್ ಪೂಜಾರಿ ಕುಂದಾಪುರ, ರಂಜನ್ ಕುಮಾರ್ ಕಟಪಾಡಿ, ಗುರುಚರಣ್ ಖಾರ್ವಿ ಗಂಗೊಳ್ಳಿ, ರೇಣುಕಾ ರಾಮ ಪೂಜಾರಿ ಕೊಡ್ಪಾಡಿ, ರಾಘವೇಂದ್ರ ಖಾರ್ವಿ ಗಂಗೊಳ್ಳಿ ಇವರನ್ನು ಸನ್ಮಾನಿಸಲಾಯಿತು.

ಸಮೂಹ ಸಂಪನ್ಮೂಲ ವ್ಯಕ್ತಿ ಸುಮನಾ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ರಾಜ್ಯ ಸರ್ಕಾರೀ ನೌಕರರ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ದಿನಕರ ಶೆಟ್ಟಿ ಸ್ವಾಗತಿಸಿ, ವಂದಿಸಿದರು.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com