ಮಣೂರು: ನಿವೃತ್ತ ಮೂಖ್ಯೋಪಧ್ಯಾಯ ರಾಮಚಂದ್ರ ಐತಾಳ್‌ರಿಗೆ ಸನ್ಮಾನ

ಶಾಲೆಯ ಸರ್ವಾಂಗೀಣ ವಿಕಾಸದಲ್ಲಿ ಜಿ. ರಾಮಚಂದ್ರ ಐತಾಳ್‌ರ ಸೇವೆ ಅನನ್ಯ 
ಕೋಟ: ಸರಕಾರಿ ಅನುದಾನಿತ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸುವ ಜೊತೆಗೆ ಶಾಲೆಯ ಕೀರ್ತಿಯನ್ನು ಹೆಚ್ಚಿಸಿ, ಶಾಲೆಯ ಸರ್ವಾಂಗೀಣ ವಿಕಾಸದಲ್ಲಿ ಪ್ರಮುಖ ಪಾತ್ರವಹಿಸಿದ ಜಿ. ರಾಮಚಂದ್ರ ಐತಾಳ್ ಅವರ ಸೇವೆ ಅನನ್ಯವಾದದು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಜೂ.6ರಂದು ಮಣೂರಿನ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಮಣೂರಿನ ಶ್ರೀ ರಾಮಪ್ರಸಾದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮೂಖ್ಯೋಪಧ್ಯಾಯರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಜಿ. ರಾಮಚಂದ್ರ ಐತಾಳ್ ಅವರು ಏರ್ಪಡಿಸಿದ ಸ್ನೇಹಕೂಟದಲ್ಲಿ ಶುಭಹಾರೈಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಮಾತನಾಡಿ, ವ್ಯಕ್ತಿಯ ಜೀವನದಲ್ಲಿ ನಿವೃತ್ತಿಯ ಘಟ್ಟ ಅತ್ಯಂತ ಮಹತ್ವದಾಗಿದೆ. ನಿವೃತ್ತಿ ಜೀವನದ ಸವಿಯನ್ನು ಅನುಭವಿಸುತ್ತಾ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುವುದರಿಂದ ಜೀವನ ಸದಾ ಕ್ರಿಯಾಶೀಲತೆಯಿಂದ ಕೂಡಿಕೊಂಡು ಬದುಕು ಸುಂದರವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಣೂರಿನ ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘದ ವತಿಯಿಂದ ಜಿ. ರಾಮಚಂದ್ರ ಐತಾಳ್ ಹಾಗೂ ದೇವಕಿ ಆರ್. ಐತಾಳ್ ದಂಪತಿಗಳನ್ನು ಸನ್ಮಾನಿಸಲಾಯಿತು. 

ಮುಖ್ಯ ಅತಿಥಿಯಾಗಿ ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಶಾನುಭಾಗ್, ಮಣೂರಿನ ಶ್ರೀ ರಾಮಪ್ರಸಾದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕ ಡಾ. ವಾಸುದೇವ ಹೊಳ್ಳ ಶುಭಹಾರೈಸಿದರು. ಸುಹಾಸ್ ಉಪಾಧ್ಯಾ, ಗೋಪಾಲ ಬಂಗೇರ, ಉಪೇಂದ್ರ ಸೋಮಯಾಜಿ, ರಣಜಿತ್ ಐತಾಳ್, ಸಂತೋಷ, ಬಾಬು, ರಾಘವೇಂದ್ರ, ಶಿವಾನಂದ ಅಡಿಗ ಇನ್ನಿತರರು ಉಪಸ್ಥಿತರಿದ್ದರು. ರಾಜಕೀಯ ಧುರೀಣ ಜಿ. ರಾಮಕೃಷ್ಣ ಐತಾಳ್ ಸ್ವಾಗತಿಸಿದರು. ಖ್ಯಾತ ಉದ್ಯಮಿ ಕೆ. ಕಾರ್ತಿಕೇಯ ಮಧ್ಯಸ್ಥ ಕಾರ್ಯಕ್ರಮ ನಿರ್ವಹಿಸಿ, ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ವಂದಿಸಿದರು

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com