ಮರವಂತೆ ಕಡಲ್ಕೊರೆತ: ಶಾಸ್ವತ ತಡೆಗೋಡೆ ನಿರ್ಮಾಣಕ್ಕೆ ಕ್ರಮ

ಮರವಂತೆ: ಇಲ್ಲಿ ಮೀನುಗಾರಿಕಾ ಹೊರಬಂದರು ತಡೆಗೋಡೆಯ ಒಳಪಾರ್ಶ್ವದಲ್ಲಿ ತೀವ್ರ ಕಡಲ್ಕೊರೆತ ಸಂಭವಿಸಿ, ಖಾಸಗಿ ಜಮೀನು ಮತ್ತು ತೆಂಗಿನ ತೋಟ ಸಮದ್ರ ಸೇರುತ್ತಿರುವ ಸ್ಥಳಕ್ಕೆ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು. 

   ಇಲ್ಲಿ ಕೆ. ಎಂ. ಕೃಷ್ಣ ಖಾರ್ವಿ ಮತ್ತು ಕೆ.ಎಂ. ಸುದರ್ಶನ ಖಾರ್ವಿ ಎಂಬವರ ಜಮೀನು, ಅದರಲ್ಲಿದ್ದ ಹತ್ತಾರು ಫಲಭರಿತ ತೆಂಗಿನ ಮರಗಳು ಈಗಾಗಲೇ ಸಮುದ್ರ ಸೇರಿವೆ.  ಬಂದರು ಕಾಮಗಾರಿ ಗುತ್ತಿಗೆದಾರರು ಕೊರೆತ ಮುಂದುವರಿಯದಂತೆ ತಡೆಯಲು ಕೈಗೊಂಡಿರುವ ತಾತ್ಕಾಲಿಕ ಕ್ರಮ ಫಲನೀಡಿಲ್ಲ. ಇದನ್ನು ಗಮನಿಸಿದ ಗೋಪಾಲ ಪೂಜಾರಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಟಿ. ಎಸ್. ರಾಥೋಡ್ ಮತ್ತು ಜಿಲ್ಲಾಧಿಕಾರಿ ಆರ್. ವಿಶಾಲ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇಲಾಖೆಯ ಇಂಜಿನಿಯರ್ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿ ಅದಕ್ಕೆ ಪ್ರಸ್ತಾವನೆ ಮತ್ತು ಅಂದಾಜು  ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ ಅವರು ಅಗತ್ಯ ಹಣಬಿಡುಗಡೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. 
   ತಾಲ್ಲೂಕು ಪಂಚಾಯತ್ ಸದಸ್ಯ ಎಸ್. ರಾಜು ಪೂಜಾರಿ, ಬಿ. ರಘುರಾಮ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಜನಾರ್ದನ, ಮಾಜಿ ಸದಸ್ಯ ರಾಮಕೃಷ್ಣ ಖಾರ್ವಿ, ಚಂದ್ರಗುಪ್ತ ಖಾರ್ವಿ, ಕೆ. ಎಂ. ಜನಾರ್ದನ ಖಾರ್ವಿ ಇತರರು ಇದ್ದರು./ 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com