ನಾಲಂದಾ ಸಾವಯವ ಮಳಿಗೆ ಆರಂಭ

ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ನಾಲಂದಾ ಸಾವಯವ ಮಳಿಗೆ ಆರಂಭವಾಗಿದೆ. ಇಲ್ಲಿ ಬೆಂಗಳೂರು ಇಸ್ಕಾನ್‌ನ ಶ್ರೀಕೃಷ್ಣನ ಫೋಟೋಗಳು, ಮೂರ್ತಿಗಳು ಸಿಗುತ್ತವೆ. ಜತೆಗೆ ಡಯಾಬಿಟೀಸ್ ಅಕ್ಕಿ, ಕೆಂಪಕ್ಕಿ, ಕೈಕಾಲು- ಮಂಡಿ ನೋವು ಇರುವವರಿಗೆ ಉಪಯುಕ್ತವಾದ ನವರ ಅಕ್ಕಿ, ರಾಜಮುಡಿ ಅಕ್ಕಿ, ಅಗಸೆ ಬೀಜ, ರಾಗಿ ಉತ್ಪನ್ನಗಳು, ಮಧುಮೇಹ ಇರುವವರಿಗೆಂದೇ ಸಿಗುವ ಕರೇಲ- ಜಾಮುನ್ ಜ್ಯೂಸ್, ರಾಗಿ ಬಿಸ್ಕತ್, ಬೊಜ್ಜು ಕರಗಿಸುವ ಜ್ಯೂಸ್ ಸಿಗುತ್ತದೆ. ಎಲ್ಲ ರೋಗಗಳ ವಿರುದ್ಧ ದೇಹಕ್ಕೆ ರಕ್ಷಣೆ ನೀಡುವ ತುಳಸಿ ಟೀ ಇಲ್ಲಿದೆ. ಎಲ್ಲ ಸಾಮನ್ಯ ಕಾಯಿಲೆಗಳಿಗೆ ಮದ್ದಾಗಿ ಬಳಸುವ ಹಲವಾರು ಬಗೆಯ ಔಷಧೀಯ ಚೂರ್ಣಗಳು ಇಲ್ಲಿ ದೊರೆಯುತ್ತವೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com