ಒಳಚರಂಡಿಗಾಗಿ ಬಲವಂತದ ಭೂಸ್ವಾಧೀನ: ಪ್ರತಿಭಟನೆ

ಕುಂದಾಪುರ: ನಗರದ ಒಳಚರಂಡಿ ನಿರ್ಮಾಣಕ್ಕಾಗಿ ಅವಶ್ಯವಿರುವ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು ಸಮಂಜಸವಲ್ಲ. ಕುಂದಾಪುರ ನಗರಕ್ಕೆ ಹೊಂದಿಕೊಂಡಿರುವ ವಡೇರಹೊಬಳಿ ಗ್ರಾಮದ ಜನನಿಬಿಡ ಪ್ರದೇಶದಲ್ಲಿ ಕೃಷಿ, ತೋಟ ಹಾಗೂ ವಾಸ್ತವ್ಯಕ್ಕೆ ಬಳಸಿಕೊಂಡಿರುವ ಭೂಮಿಯನ್ನು ಏಕಾಏಕಿ ವಶಪಡಿಸಿಕೊಳ್ಳಲು ಮುಂದಾಗಿರುವ ಆಡಳಿತ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ ಎಂದು ವಡೇರಹೊಬಳಿ ಗ್ರಾಮದಸ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ರಾಜೇಶ್ ವಡೇರಹೊಬಳಿ ಹೇಳಿದರು.  

ಅವರು ಕುಂದಾಪುರ ಪುರಸಭೆಯ ಎದುರು ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡುತ್ತಿದ್ದರು. 
ವಡೇರಹೋಬಳಿ ಗ್ರಾಮದ ಸುಮಾರು 84ಕ್ಕೂ ಅಧಿಕ ಭೂಹಿಡುವಳಿದಾರ ಕೃಷಿಕರಿಗೆ ನೊಟೀಸು ಜಾರಿಮಾಡಲಾಗಿದ್ದು,  ಬಲತ್ಕಾರದಿಂದ ಭೂ ಸ್ವಾಧೀನಪಡಿಸಿರುವುದರ ಬಗ್ಗೆ ಆಕ್ಷೇಪಣೆಯನ್ನು ಘೋಷಣೆಯ ಮೂಲಕ ಕೂಗಿದ ಸಂತ್ರಸ್ತರು ಇಂತಹ  ಪ್ರದೆಶದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಒಳಚರಂಡಿ ಯೋಜನೆಯ ನಿರ್ಮಾಕ್ಕೆ ಭೂಸ್ವಾಧೀನ ಪಡಿಸುವುದಕ್ಕೆ ಆಕ್ಷೇಪಣೆ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು.  ಒಳಚರಂಡಿ ನಿರ್ಮಾಣಕಕ್ಕೆ ಬದಲಿ ಪರ್ಯಾಯ  ಭೂಮಿಯನ್ನು ಸ್ವಾಧೀನಪಡಿಸಲು ಇಲಾಖೆ ಕ್ರಮ ವಹಿಸಬೇಕು  ಎಂದು ಒತ್ತಾಯಿಸಲಾಯಿತು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಪುರಸಭಾ ಅಧ್ಯಕ್ಷೆ ಕಲಾವತಿ ಜಿಲ್ಲಾಧಿಕಾರಿಗಳಿಗೆ ಬಗ್ಗೆ ಪತ್ರ ಬರೆದು, ಸಮಸ್ಯೆಗೆ ಶೀಘ್ರವೇ ಸ್ವಂದಿಸುವ ಭರವಸೆ ನೀಡಿದರು.
 
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಮುಖಂಡರಾದ ಶಂಕರ್, ದಾಸ ಭಂಡಾರಿ, ತಾಲೂಕು ಪ್ರಮುಖರಾದ ನರಸಿಂಹ ಎಚ್., ವೆಂಕಟೇಶ್ ಕೋಣಿ, ಸುರೇಶ್ ಕಲ್ಲಾಗರ್, ಶಿವ ಮೆಂಡನ್‌, ಮಹಾಬಲ ಮಡೇರಹೊಬಳಿ ಮೊದಲಾದವರು ಪಾಲ್ಗೊಂಡಿದ್ದರು.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com