ರೋಟರಿ: ಅಧ್ಯಕ್ಷರಾಗಿ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು

ಕುಂದಾಪುರ: ಪ್ರತಿಷ್ಠಿತ ರೋಟರಿ ಕುಂದಾಪುರದ 2015-16ರ ಸಾಲಿನ ಅಧ್ಯಕ್ಷರಾಗಿ ಕೋಣಿಯ ಮಾತಾ ಮಾಂಟೆಸ್ಸೋರಿ ಶಾಲೆಯ ಆಡಳಿತ ನಿರ್ದೇಶಕ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಆಯ್ಕೆಯಾಗಿದ್ದಾರೆ. ಪ್ರಸಕ್ತ ಸಾಲಿನ ಜೀವಾ ವಿಮಾ ನಿಗಮದ ಏಕೈಕ ಎಂಡಿಆರ್‌ಟಿ ಪ್ರತಿನಿಧಿಯಾಗಿರುವ ಇವರು ಜಿಲ್ಲಾ ಪ್ರಗತಿಪರ ಚಿಂತಕರ ವೇದಿಕೆಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
     ಅವಿಭಜಿತ ದಕ್ಷಿಣ ಕನ್ನಡದ ಎರಡನೇಯ ರೋಟರಿ ಕ್ಲಬ್ ಆಗಿ 1960ರಲ್ಲಿ ಸ್ಥಾಪನೆಯಾಗಿ, ಹಿಂದಿನ ಅಧ್ಯಕ್ಷರುಗಳು ಹಾಗೂ ನಿಷ್ಠ ಸದಸ್ಯರ ಪರಿಶ್ರಮದಿಂದ ತನ್ನ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿಕೊಂಡು ರೋಟರಿ ಜಿಲ್ಲೆ 3180ರ ಅತೀ ದೊಡ್ಡ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರೋಟರಿ ಕುಂದಾಪುರದ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಲಿದ್ದಾರೆ.
    ಕಾರ್ಯದರ್ಶಿಯಾಗಿ ಸಂತೋಷ್ ಕೋಣಿ, ಖಜಾಂಚಿಯಾಗಿ ಪ್ರದೀಪ್ ವಾಜ್, ರೋಟರಿ ಸಾಕ್ಷರತಾ ಸೇವೆ ಸಂಚಾಲಕರಾಗಿ ಗೋಪಾಲ ಶೆಟ್ಟಿ, ಮೆಂಬರ್‌ಶಿಪ್ ಡೆವೆಲಪ್‌ಮೆಂಟ್ ಸಮಿತಿ ಸಂಚಾಲಕರಾಗಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಸಾಮಾಜಿಕ ಸೇವೆಯ ನಿರ್ದೇಶಕರಾಗಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕ್ಲಬ್ ಸರ್ವೀಸ್‌ನ ನಿರ್ದೇಶಕರಾಗಿ ಸಾಲಗದ್ದೆ ಶಶಿಧರ ಶೆಟ್ಟಿ, ಅಂತರಾಷ್ರೀಯ ಸೇವೆಯ ನಿರ್ದೇಶಕರಾಗಿ ರವಿರಾಜ್ ಶೆಟ್ಟಿ, ವೃತ್ತಿಪರ ಸೇವೆಯ ನಿರ್ದೇಶಕರಾಗಿ ನಾಗರಾಜ ಮಯ್ಯ, ಯುವಜನ ಸೇವೆಯ ನಿರ್ದೇಶಕರಾಗಿ ಪ್ರವೀಣ್ ಟಿ, ಟಿಆರ್‌ಎಫ್ ಸಂಚಾಲಕರಾಗಿ ಶ್ರೀಪಾದ ಉಪಾಧ್ಯಾ, ಪಲ್ಸ್ ಪೋಲಿಯೊ ಸಂಚಾಲಕರಾಗಿ ಎಸ್. ರಾಜೀವ್ ಶೆಟ್ಟಿ, ದಂಡಪಾಣಿಯಾಗಿ ನೂಜಾಡಿ ಸಂತೋಷ್‌ಕುಮಾರ್ ಶೆಟ್ಟಿ, ರೋಟರ‍್ಯಾಕ್ಟ್ ಕ್ಲಬ್ ಸಂಚಾಲಕರಾಗಿ ಎಚ್.ಎಸ್.ಹತ್ವಾರ್, ಕ್ಲಬ್ ಬುಲೆಟಿನ್ ಸಂಪಾದಕರಾಗಿ ಶ್ರೀಧರ ಸುವರ್ಣ ಆಯ್ಕೆಯಾದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com