ರೋಟರಿ ಆನ್ಸ್ ಕ್ಲಬ್: ಗಡಿಯಾರ ಕೊಡುಗೆ

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಅಂಗ ಸಂಸ್ಥೆ ಆನ್ಸ್ ಕ್ಲಬ್‌ನ ವತಿಯಿಂದ ಇತ್ತೀಚೆಗೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ಆರಂಭವಾಗಿರುವ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ರಕ್ತನಿಧಿ ಘಟಕಕ್ಕೆ ಗೋಡೆ ಗಡಿಯಾರವನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಜಯಕರ್ ಶೆಟ್ಟಿ, ಆನ್ಸ್ ಕ್ಲಬ್‌ನ ಛೇರ್‌ಮೆನ್ ಡಾ| ಹೆಚ್.ಎಸ್ ಮಲ್ಲಿ, ರೋಟರಿ ಅಧ್ಯಕ್ಷ ಮನೋಜ್ ನಾಯರ್, ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ಬಿಂದು ನಾಯರ್, ರೋಟರಿ ನಿಯೋಜಿತ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಖಜಾಂಚಿ ಪ್ರದೀಪ್ ವಾಜ್, ನಿಯೋಜಿತ ದಂಡಪಾಣಿ ನೂಜಾಡಿ ಸಂತೋಷ್ ಶೆಟ್ಟಿ, ಹಿರಿಯ ಸದಸ್ಯ ಡಾ| ಎಂ.ಎನ್. ಅಡಿಗ, ಆನ್ಸ್ ಕ್ಲಬ್ಬಿನ ನಿಯೋಜಿತ ಅಧ್ಯಕ್ಷೆ ಭಾರತಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಸ್ಮಿತಾ ವೆಂಕಟೇಶ್ ಹಾಗೂ ಖಜಾಂಚಿ ರತ್ನಮ್ಮ ಹೊಳ್ಳ, ವಿ.ಆರ್.ಕೆ ಹೊಳ್ಳ, ಮುತ್ತಯ್ಯ ಶೆಟ್ಟಿ, ಡಾ| ಛಾಯಾ ಹೆಬ್ಬಾರ್, ಗೋಪಾಲ ಕೃಷ್ಣ ಶೆಟ್ಟಿ ಶಿರಿಯಾರ, ಕಾರ್ಯದರ್ಶಿ ಕೆ.ವಿ.ನಾಯಕ್, ಕೃಷ್ಣ ಕಾರಂತ್, ಚಂದ್ರ ಪೂಜಾರಿ, ನಿಯೋಜಿತ ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com