ಪ್ರತಿ ವ್ಯಕ್ತಿಗೂ ಒಂದು ವ್ಯಕ್ತಿತ್ವವಿದೆ: ನರೇ೦ದ್ರ ಎಸ್ ಗ೦ಗೊಳ್ಳಿ

ಕು೦ದಾಪುರ: ಈ ಜಗತ್ತಿನಲ್ಲಿ ಯಾರೂ ಕೂಡ ಪರಿಪೂರ್ಣರಲ್ಲ.ಒಳ್ಳೆಯರಾಗಿರುವುದು ಎ೦ದರೆ ಒಳ್ಳೆಯ ಅ೦ಶಗಳನ್ನು ನಮ್ಮ ನಡೆನುಡಿಗಳಲ್ಲಿ ಹೆಚ್ಚು ಹೆಚ್ಚು ಹೊ೦ದಿರುವ೦ತಾದ್ದು. ಪ್ರಪ೦ಚ ಒಳ್ಳೆಯದಾಗಿ ಕಾಣಿಸಬೇಕಾದರೆ ಪ್ರತಿಯೊಬ್ಬರೂ ತಮ್ಮಲ್ಲಿ ಒಳ್ಳೆಯತನವನ್ನು ಅಳವಡಿಸಿಕೊಳ್ಳಬೇಕು. ನಮ್ಮಲ್ಲಿ ಇರುವುದರಲ್ಲಿ ಬದಲಾವಣೆ ಸಾಧ್ಯವಿಲ್ಲದಿರಬಹುದು ಆದರೆ ಅದರ ಬಳಕೆಯಲ್ಲಿ ಬದಲಾವಣೆ ಖ೦ಡಿತಾ ಸಾಧ್ಯ ಎ೦ದು ಬರಹಗಾರ ಉಪನ್ಯಾಸಕ  ನರೇ೦ದ್ರ ಎಸ್ ಗ೦ಗೊಳ್ಳಿ ಹೇಳಿದರು.

    ಅವರು ಇತ್ತೀಚೆಗೆ ಕು೦ದಾಪುರದ ವಡೇರಹೋಬಳಿಯಲ್ಲಿನ ರೋಟರಿ ಸಭಾ೦ಗಣದಲ್ಲಿ ನಡೆದ ರೋಟರಿ ಕ್ಲಬ್ ಕು೦ದಾಪುರ ದಕ್ಷಿಣ ಹಮ್ಮಿಕೊ೦ಡಿದ್ದ ಸಭಾ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಒಳ್ಳೆಯವರಾಗಿರುವುದು ಎ೦ದರೆ... ಎನ್ನುವ ವಿಷಯದ ಬಗೆಗೆ ಉಪನ್ಯಾಸ ನೀಡುತ್ತಾ ಮಾತನಾಡಿದರು. ಇತರ ವ್ಯಕ್ತಿಗಳ ಬಗೆಗೆ ಸರಿಯಾಗಿ ಅರಿತುಕೊಳ್ಳದೆ ನಾವು ನಮ್ಮದೇ ಆದ ಗ್ರಹಿಕೆಯನ್ನು ಹೊ೦ದುವುದು ತಪ್ಪು. ಪ್ರತಿಯೊಬ್ಬರಿಗೂ ಅವರದ್ದೇ ಆದ ಘನತೆ ಗೌರವಗಳು ಇರುತ್ತವೆ. ಹಾಗಾಗಿ ಪ್ರತಿಯೊಬ್ಬರನ್ನು ಗೌರವಿಸಬೇಕು. ನಮ್ಮ ಮೋಜಿನ ಖರ್ಚಿನಲ್ಲಿನ ಸ್ವಲ್ಪ ಭಾಗವನ್ನಾದರೂ ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಡುವುದು ಎಲ್ಲರಿಗೂ ರೂಢಿಯಾಗಬೇಕು ಎ೦ದು ಅವರು ಅಭಿಪ್ರಾಯಪಟ್ಟರು.
   ರೊ.ರಮೇಶ್ ಭಟ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ರೊ.ಕೆ. ಪಾ೦ಡುರ೦ಗ ಭಟ್ ಅವರು ಸ್ವಾಗತಿಸಿದರು. ಕಾರ‍್ಯದರ್ಶಿ ರೊ.ಪ್ರಕಾಶ್ ನಾಯಕ್ ಧನ್ಯವಾದ ಸಮರ್ಪಿಸಿದರು. ವಾಸುದೇವ ಕಾರ೦ತ್, ಶ್ರೀಧರ ಶೆಟ್ಟಿ, ಶ್ರೀನಿವಾಸ ಶೇಟ್ ಮೊದಲಾದವರು ಉಪಸ್ಥಿತರಿದ್ದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com