ಮರವಂತೆ: ನಿವೃತ್ತ ಉದ್ಯೋಗಿಗೆ ವಿದಾಯ

ಮರವಂತೆ: ಪ್ರಾಥಮಿಕ ಆರೋಗ್ಯ ಕೇಂದ್ರದ ಆರಂಭದಿಂದ ಈ ವರೆಗೆ 39 ವರ್ಷ ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸಿ ಮಾಸಾಂತ್ಯ ನಿವೃತ್ತರಾದ ಟಿ. ನಾರಾಯಣ ಅವರಿಗೆಕೇಂದ್ರದ ವತಿಯಿಂದ ಶನಿವಾರ ವಿದಾಯ ಕೂಟ ಏರ್ಪಡಿಸಲಾಗಿತ್ತು.

ವೈದ್ಯಾಧಿಕಾರಿ ಡಾ. ಗಿರೀಶ ಗೌಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ, ನಿವೃತ್ತ ಹಿರಿಯ ಆರೋಗ್ಯ ಸಹಾಯಕ ಸುಧಾಕರ ಶೆಟ್ಟಿ, ಇಲಾಖೆಯ ಸಿಬ್ಬಂದಿಗಳಾದ ಶ್ರೀಧರ ಜಿ. ನಾಯ್ಕ್, ಮಂಜುನಾಥ ನಿವೃತ್ತರ ಪ್ರಾಮಾಣಿಕ ಮತ್ತು ನಿಸ್ಪ್ರಹ ಸೇವೆಯನ್ನು ಸ್ಮರಿಸಿ, ಅವರಿಗೆ ನೆಮ್ಮದಿ ಮತ್ತು ಸಂತಸದ ನಿವೃತ್ತ ಜೀವನ ಹಾರೈಸಿದರು.

ಟಿ. ನಾರಾಯಣ ದಂಪತಿಗೆ ಸಿಬ್ಬಂದಿ ಪರವಾಗಿ ಶಾಲು ಸ್ಮರಣಿಕೆ ನೀಡಿ, ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಲಾಯಿತು. ಕೇಂದ್ರದ ಸಿಬ್ಬಂದಿ ಹುಲಿಯಪ್ಪ ಗೌಡ ಸ್ವಾಗತಿಸಿ, ಜಿ. ವಿನಯ ವಂದಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ನರಸಿಂಹ ಶೆಟ್ಟಿ, ಕೇಂದ್ರದ ಎಲ್ಲ ಸಿಬ್ಬಂದಿ ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com