ರೋಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು 2015-16ನೇ ಸಾಲಿನ ಪದಪ್ರದಾನ ನೆರವೇರಿಸಿ ಮಾತನಾಡಿದರು.
ಕುಂದಾಪುರ: ಯಶಸ್ವಿ ಬದುಕು ಕಟ್ಟುವುದರಲ್ಲಿ ಮಹಿಳೆಯರ ಪಾತ್ರ ಹಿರಿದಾದದು. ಕುಟುಂಬ ಮತ್ತು ಸಮಾಜದಲ್ಲಿ ಸಮನ್ವಯತೆಯನ್ನು ಸಾಧಿಸಿಕೊಂಡು ಮುನ್ನಡೆದಾಗ ಮಹಿಳೆ ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತದೆ ಎಂದು ರೋಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಹೇಳಿದರು.
ಅವರು ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಆನ್ಸ್ ಕ್ಲಬ್ ಕುಂದಾಪುರ ಇದರ 2015-16ನೇ ಸಾಲಿನ ಪದಪ್ರದಾನ ನೆರವೇರಿಸಿ ಮಾತನಾಡಿದರು.
ನೂತನ ಅಧ್ಯಕ್ಷೆಯಾಗಿ ಭಾರತಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಸುನೇತ್ರಾ ಸತೀಶ್ ಕೋಟ್ಯಾನ್ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆನ್ಸ್ ಕ್ಲಬ್ ನಿರ್ಗಮಿತ ಚೇರ್ಮೆನ್ ಡಾ| ಎಚ್. ಎಸ್. ಮಲ್ಲಿ, ಪ್ರಸಕ್ತ ಸಾಲಿನ ಚೇರ್ಮೆನ್ ವೆಂಕಟೇಶ್ ಉಪಸ್ಥಿರಿದ್ದರು.
2014-15ನೇ ಸಾಲಿನ ನಿಕಟಪೂರ್ವ ಹಾಗು ನಿರ್ಗಮಿತ ಅಧ್ಯಕ್ಷೆ ಬಿಂದು ಮನೋಜ್ ನಾಯರ್ ಅವರು ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಸ್ಮಿತಾ ವೆಂಕಟೇಶ್ ಅವರು ಕಳೆದ ಸಾಲಿನ ಕಾರ್ಯ ಚಟುವಟಿಕೆಗಳ ವರದಿ ವಾಚಿಸಿದರು.
0 comments:
Post a Comment