ತುರ್ತು ಪರಿಹಾರದ ಚೆಕ್ ವಿತರಣೆ

ಗಂಗೊಳ್ಳಿ: ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಯಲ್ಲಿ ಗಂಗೊಳ್ಳಿಯ ಪಂಚಗಂಗಾವಳಿ ನದಿಗೆ ಬಿದ್ದು ಸಾವನ್ನಪ್ಪಿದ ಗಂಗೊಳ್ಳಿಯ ಯೋಗೇಂದ್ರ ದೇವಾಡಿಗ ಕುಟುಂಬಕ್ಕೆ ಸರಕಾರ ಪ್ರಾಕೃತಿಕ ವಿಕೋಪ ನಿಧಿಯಿಂದ ತುರ್ತು ಪರಿಹಾರ ಮಂಜೂರು ಮಾಡಿದೆ.

ಸಂಜೆ ಮೃತರ ಮನೆಗೆ ಭೇಟಿ ನೀಡಿದ ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯಕ್ ಅವರು ಪ್ರಾಕೃತಿಕ ವಿಕೋಪ ನಿಧಿಯಿಂದ ೪ ಲಕ್ಷ ರೂ. ಮೊತ್ತರ ತುರ್ತು ಪರಿಹಾರದ ಚೆಕ್‌ನ್ನು ಮೃತರ ತಾಯಿ ಸೀತು ದೇವಾಡಿಗ ಅವರಿಗೆ ಹಸ್ತಾಂತರಿಸಿದರು. 

ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಸದಸ್ಯರಾದ ಗೋಪಾಲ ಖಾರ್ವಿ, ರಾಜ ಖಾರ್ವಿ, ಮಾಜಿ ಗ್ರಾಪಂ ಸದಸ್ಯ ಉಮಾನಾಥ ದೇವಾಡಿಗ, ಕಂದಾಯ ನಿರೀಕ್ಷಕ ಅಶೋಕಕುಮಾರ್, ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೃತ ಯೋಗೇಂದ್ರ ದೇವಾಡಿಗ ಭಾನುವಾರ ರಾತ್ರಿ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ಪಂಚಗಂಗಾವಳಿ ನದಿ ತೀರದಲ್ಲಿ ಗಾಳ ಹಾಕುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನದಿಗೆ ಬಿದ್ದು ಸಾವನ್ನಪ್ಪಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com