ಎಸ್.ವಿ ಕಾಲೇಜು: ಎನ್ಎಸ್ಎಸ್ ಉದ್ಘಾಟನೆ

ಗ೦ಗೊಳ್ಳಿ : ನಾವು ಜೀವನದಲ್ಲಿನ ಸಣ್ಣ ಸಣ್ಣ ವಿಷಯಗಳತ್ತ ಮೊದಲು ಗಮನ ಹರಿಸಿ ಅದರಲ್ಲಿ ಸ೦ತೃಪ್ತಿಯನ್ನು ಕಾಣುವುದನ್ನು ಕಲಿತುಕೊಳ್ಳಬೇಕಿದೆ.ಗುರಿಗಳನ್ನು ಇಟ್ಟುಕೊಳ್ಳುವುದಕ್ಕಿ೦ತ ಆ ನಿಟ್ಟಿನಲ್ಲಿ ನಾವೆಷ್ಟು ಶ್ರಮ ಪಡುತ್ತೇವೆ ಅನ್ನುವುದು ಮುಖ್ಯ.ನಿರ೦ತರ ಶ್ರಮ ನಮ್ಮನ್ನು ಯಶಸ್ಸಿನತ್ತ ಕೊ೦ಡೊಯ್ಯುತ್ತದೆ ಎ೦ದು ಸಿದ್ದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಗಣೇಶ ಹೆಬ್ಬಾರ್ ಅಭಿಪ್ರಾಯಪಟ್ಟರು.

    ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಸಕ್ತ ವರುಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.ಎನ್ನೆಸ್ಸೆಸ್  ನಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಒ೦ದು ಧೃಢ ವ್ಯಕ್ತಿತ್ವವನ್ನು ರೂಪಿಸಲು ಸಹಾಕಾರಿಯಾಗುತ್ತದೆ ಎ೦ದು ಅವರು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಮಾತನಾಡಿ ಯಾವುದೇ ಕೆಲಸದಲ್ಲಿ ನಾವು ತೋರಿಸುವ ಅನಾಸಕ್ತಿ ನಮ್ಮ ಬೆಳವಣಿಗೆಗ ಅಡ್ಡಿಯಾಗುತ್ತದೆ ಎ೦ದು ಅಭಿಪ್ರಾಯ ಪಟ್ಟರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇತಿಹಾಸ ಪ್ರಾಧ್ಯಾಪಕ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.
   ನವ್ಯಶ್ರೀ ಪ್ರಾರ್ಥಿಸಿದರು.ವಿದ್ಯಾ ಪ್ರತಿಮಾ,ಸುಶ್ಮಿತಾ ಮತ್ತು ಮೇಘ ಎನ್ನೆಸ್ಸೆಸ್ ಗೀತೆ ಹಾಡಿದರು. ರಮೇಶ ಅತಿಥಿಗಳನ್ನು ಪರಿಚಯಿಸಿದರು. ಅನುಷಾ ಕಾರ‍್ಯಕ್ರಮವನ್ನು ನಿರೂಪಿಸಿದರು. ನಿಖಿಲ್ ವ೦ದಿಸಿದರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com