ಸರ್ಕಾರಿ ನೌಕರರ ಸಂಘದ ವಸತಿ ಗೃಹ ಉದ್ಘಾಟನೆ

ಕುಂದಾಪುರ:  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಸತಿ ಗೃಹವನ್ನು  ಡಿ.ವೈ.ಎಸ್.ಪಿ ಮಂಜುನಾಥ ಶೆಟ್ಟಿ ಇವರು ಉದ್ಘಾಟನೆ ಮಾಡಿದರು. ಸಂಘದ ಅಧ್ಯಕ್ಷರಾದ ಕೆ ದಿನಕರ ಶೆಟ್ಟಿ ಅಂಪಾರು ಇವರು ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಹಿತಕ್ಕಾಗಿ ದುಡಿಯುತ್ತಿದ್ದು ಕುಂದಾಪುರ ತಾಲೂಕಿನ ಯಾವುದೇ ಸದಸ್ಯರು ತನ್ನ ಅಗತ್ಯತೆಗೆ ತಕ್ಕಂತೆ ಈ ಸುಸಜ್ಜಿತವಾದ ವಸತಿ ಗೃಹದಲ್ಲಿ ಉಳಿದುಕೊಳ್ಳ ಬಹುದು.  ಸಂಘವು ಮಾಡುವ ಎಲ್ಲಾ ಅಭಿವೃದ್ದಿ ಚಟುವಟಿಕೆಯು ಸಮಸ್ತ ಕುಂದಾಪುರ ತಾಲೂಕಿನ 3,320 ಸರ್ಕಾರಿ ನೌಕರರ ಸ್ವತ್ತು ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತೆ ಕರೆ ನೀಡಿದರು.
       ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ಶೇರಿಗಾರ ಮತ್ತು  ಸಂಘದ ಕಾರ್ಯದರ್ಶಿ ಚಂದ್ರಕಾಂತ.ಬಿ, ಕೋಶಾಧಿಕಾರಿ ಶ್ರೀಧರ್.ಜಿ.ನಾಯ್ಕ, ಉಪಾಧ್ಯಕ್ಷರಾದ  ಪ್ರಕಾಶ್ಚಂದ್ರ ಶೆಟ್ಟಿ, ವಿಶ್ವನಾಥ ಪೂಜಾರಿ, ಜೊತೆ ಕಾರ್ಯದರ್ಶಿಯಾದ ಸಂತೋಷ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾದ ದಿವಾಕರ ಎನ್ ಖಾರ್ವಿ, ಹೆಚ್.ಟಿ.ರಮೇಶ ಶೆಟ್ಟಿ, ಸಂಸ್ಕ್ರತಿಕ ಕಾರ್ಯದರ್ಶಿಯಾದ ಕರುಣಾಕರ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ರಾಧಾಕೃಷ್ಣ.ಯು, ಶೇಖರ ಪೂಜಾರಿ, ಸುರೇಶ್.ಎನ್ ಶೆಟ್ಟಿ, ಭರತ್.ವಿ.ಶೆಟಿ, ಸುಬ್ಬರಾಯ ಗಾಣಿಗ, ಬಾಲಕೃಷ್ಣ ಗಾಣಿಗ, ನಾಗರಾಜ ಶೇರಿಗಾರ, ಮಹಾಬಲ ಹೇರಿಕುದ್ರು, ಪ್ರೀತಾ ಗಾಣಿಗ ಮತ್ತು ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ  ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com