ತಾಳಮದ್ದಲೆಯಿಂದ ಪುರಾಣದ ಹಿನ್ನೆಲೆಯನ್ನು ತಿಳಿಯಬಹುದು

ಕುಂದಾಪುರ: ತಾಳಮದ್ದಲೆಯ ಕೂಟದ ಅರ್ಥದಾರಿಗೆ ಪುರಾಣದ ಸಂಪೂರ್ಣ ಪರಿಚಯ ಬೇಕಾಗುತ್ತದೆ. ಅಂತೆಯೇ ಕಲಾಭಿಮಾನಿಗಳಿಗೆ ತಾಳಮದ್ದಲೆ ಮಾಧ್ಯಮದಿಂದ ಪುರಾಣದ ಹಿನ್ನಲೆಯನ್ನು ಸವಿಸ್ತಾರವಾಗಿ ತಿಳಿಯಲು ಸಹಕಾರಿಯಾಗುತ್ತದೆ ಎಂದು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.
ಕೋಟಿಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ಪ್ರಭಾಕರ ಶೆಟ್ಟಿ ಇತ್ತೀಚೆಗೆ ಕೋಟಿಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಂಚಾರಿ ಯಕ್ಷಗಾನ ಮಂಡಳಿಯ 13ನೇ ವರ್ಷದ ತಿರುಗಾಟದ ಉದ್ಘಾಟನೆಯನ್ನು ಮಾಡಿದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್‌ ಮಾತನಾಡುತ್ತ ಕರಾವಳಿ ಕರ್ನಾಟಕದ ಹೆಮ್ಮೆಯ ಜಾನಪದ ಕಲೆ ಯಕ್ಷಗಾನ. ಅದರ ಇನ್ನೊಂದು ಭಾಗವೇ ತಾಳಮದ್ದಲೆ, ಹಾಗಾಗಿ ಕೋಟೇಶ್ವರದಿಂದ ಹೊರಡುವ ಏಕೈಕ ತಾಳಮದ್ದಲೆಯ  ಸಂಯಮ ವಾಗಿರುವುದರಿಂದ ಕಲಾಭಿಮಾನಿಗಳಾದ ನಾವುಗಳು ಸಹಕರಿಸಬೇಕಾದ್ದು ಕರ್ತವ್ಯ ಎಂದು ಹೇಳಿದರು. 
ಸಂಯಮದ ಭಾಗವತರಾದ ರವಿಕುಮಾರ್ ಸೂರಾಲ್‌ ಅತಿಥಿಗಳನ್ನು ಶಾಲು ಹೊದಿಸಿ ಗೌರವಿಸಿದರು. ಸಂಯಮದ ಸಂಚಾಲಕರಾದ ಎಮ್.ಆರ್. ವಾಸುದೇವ ಸಾಮಗ ಸ್ವಾಗತಿಸಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com