ಧರ್ಮ ಸಂಸ್ಕೃತಿಯ ಸಂರಕ್ಷಕಿ ಮಹಿಳೆ

ಮರವಂತೆ: ಸನಾತನ ಪರಂಪರೆ ಮಹಿಳೆಯನ್ನು ಧರ್ಮ ಮತ್ತು ಸಂಸ್ಕೃತಿಯ ಸಂರಕ್ಷಕಿ ಎಂದು ಭಾವಿಸಿದ್ದರಿಂದ ಅವಳಿಗೆ ವಿಶೇಷ ಸ್ಥಾನಮಾನ ನೀಡಿ ಗೌರವಿಸುತ್ತ ಬಂದಿದೆ. ಸಶಕ್ತ ಮತ್ತು ಸುಸಂಸ್ಕೃತ ಕುಟುಂಬ ಮತ್ತು ಸಮಾಜವನ್ನು ನಿರ್ಮಿಸುವ ಶಕ್ತಿ ಇರುವುದು ಮಹಿಳೆಗೆ ಮಾತ್ರ. ಆದುದರಿಂದ ಮಹಿಳೆಯ ಬಗೆಗೆ ಉಪೇಕ್ಷೆ ತಾಳುವುದು ಸರಿಯಾದ ಮನೋಧರ್ಮವಲ್ಲ  ಎಂದು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ವಕ್ವಾಡಿ ಸುಬ್ರಹ್ಮಣ್ಯ ಐತಾಳ್ ಹೇಳಿದರು. 

   ಕಿರಿಮಂಜೇಶ್ವರ ಗ್ರಾಮದ ನಾಗೂರು ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದಲ್ಲಿ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು, ಮಹಿಳಾ ವೇದಿಕೆ ಮತ್ತು ಉಪ್ಪುಂದ ವಲಯ ಸಮಿತಿ ಆಶ್ರಯದಲ್ಲಿ ನಡೆದ ತಾಲೂಕು ವಿಪ್ರ ಮಹಿಳಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
   ನಿವೃತ್ತ ಶಿಕ್ಷಕಿ ಸುಧಾ ರಾಮಮೂರ್ತಿ ಸಮಾವೇಶವನ್ನು ಉದ್ಘಾಟಿಸಿ ಶುಭ ಕೋರಿದರು. ಆಶಾ ಕಾರಂತ ಪ್ರಾರ್ಥಿಸಿದರು. ವೀಣಾ ಶ್ಯಾನುಭಾಗ್ ಸ್ವಾಗತಿಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಅನ್ನಪೂರ್ಣ ಎಂ. ಉಡುಪ ಪ್ರಸ್ತಾವನೆಗೈದರು. ಗಾಯತ್ರಿ ಆಚಾರ್ಯ ವಂದಿಸಿದರು. ಭಾರತಿ ಉಪಾಧ್ಯಾಯ ನಿರೂಪಿಸಿದರು. ಪರಿಷತ್ತಿನ ಗೌರವಾಧ್ಯಕ್ಷ ಯು. ರಮೇಶ ವೈದ್ಯ. ನಿಯೋಜಿತ ಅಧ್ಯಕ್ಷ ಗಣೇಶ ರಾವ್ ಸಾಂದರ್ಭಿಕ ನುಡಿಗಳನ್ನಾಡಿದರು. 

   ಡಾ. ರೂಪಶ್ರೀ ಮರವಂತೆ ಮನೆಮದ್ದು ಮತ್ತು ಆರೋಗ್ಯ ರಕ್ಷಣೆ ಕುರಿತು, ಶಾಂತಾ ಗಣೇಶ ರಾವ್ ಅವರು ಹದಿಹರೆಯದ ಹೆಣ್ಣುಮಕ್ಕಳ ಸಮಸ್ಯೆಗಳು ಮತ್ತು ಪರಿಹಾರಗಳ ಬಗೆಗೆ ಮತ್ತು ಶೋಭಾ ಅರಸ್ ಸಂಸ್ಕೃತಿ ಮತ್ತು ಸಂಸ್ಕಾರ ವಿಚಾರವಾಗಿ ಉಪನ್ಯಾಸ ನೀಡಿದರು. ವಿವಿಧ ವಲಯಗಳ ವಿಪ್ರ ಮಹಿಳಾ ಸಾಧಕಿಯರಾದ ರತ್ನಮ್ಮ ಹೊಳ್ಳ, ಸರಸ್ವತಿ, ರಾಜಲಕ್ಷ್ಮೀ ರಾವ್, ಇಂದಿರಮ್ಮ, ಶೋಭಾ ಪುರಾಣಿಕ್, ಶಾರದಾ ಅಡಿಗ, ಜಾನಕಿ ಉಡುಪ, ಸರೋಜಾಕ್ಷಿ ಆರ್. ಬಾಯಿರಿ, ಅಹಲ್ಯಾ ಬಾಯಿರಿ, ಇಂದಿರಾ ಉಡುಪ, ಪುಷ್ಪಲತಾ ಯು. ಶ್ಯಾನುಭಾಗ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳು ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಹೆಣ್ಣುಮಕ್ಕಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com