ವಕ್ವಾಡಿ: ವನಮಹೋತ್ಸವ ಹಾಗೂ ಸಸಿ ವಿತರಣೆ

ಕುಂದಾಪುರ: ಹಸಿರನ್ನು ಕಾಪಾಡುವ ಕೆಲಸ ವಿಶಿಷ್ಟವಾದುದು,ಕೊಟ್ಟ ಸಸಿಗಳನ್ನು ನೆಟ್ಟು ಬಾಳಿಸಿದಾಗಲೇ ಈ ಕೆಲಸ ಸಾರ್ಥಕವಾಗುತ್ತದೆ.ಅನೇಕ ವರ್ಷಗಳಿಂದ ಜನರ ಮನ ಗೆಲ್ಲುವ ಕೆಲಸ ಮಾಡುತ್ತಾ ಬಂದಿರುವ ಯುವಕಮಂಡಲ ಇನ್ನಷ್ಟು ಸಮೃಧ್ದಿಯ ಕೆಲಸ ಮಾಡಲಿಎಂದು ನಿವೃತ್ತ ಅಧ್ಯಾಪಕರಾದ ವಕ್ವಾಡಿ ಚಂದ್ರಶೇಖರ ಶೆಟ್ಟಿಗಾರ ಹೇಳಿದರು. 

ಯುವ ಶಕ್ತಿಮಿತ್ರಮಂಡಳಿ ರಿ. ವಕ್ವಾಡಿ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ವಕ್ವಾಡಿ ಇವರ ಜಂಟೀ ಆಶ್ರಯದಲ್ಲಿ ನಡೆದ  ವನಮಹೋತ್ಸವ ಹಾಗೂ ಸಸಿ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಾ.ಉ.ಸ.ಸಂಘದ ಉಪಾಧ್ಯಕ್ಷರಾದ ವಿ.ನರಸಿಂಹ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಯುವಕ ಮಂಡಲದ ಅಧ್ಯಕ್ಷ ಸಂದೀಪ ಪೂಜಾರಿ ಸ್ವಾಗತಿಸಿದರು.ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ,ಸದಾನಂದ ಶೆಟ್ಟಿಗಾರ ಹಾಗೂ ಸುಧೀಂದ್ರ, ಸಂತೋಷ, ರಾಜು ಕುಲಾಲ, ರಾಜೇಶ ಪೂಜಾರಿ ಮುಂತಾದವರು ಇದ್ದರು. ರಂಜಿತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com