ರಂಗ ಸಂಚಲನ: ಪ್ರತಿಭೆಯನ್ನು ಗುರುತಿಸುವುದು ಮುಖ್ಯ

ಬೈಂದೂರು: ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ. ಆದರೆ ಅದನ್ನು ಗುರುತಿಸುವುದು ಮುಖ್ಯವಾಗುತ್ತದೆ. ಸಂಚಲನ ಸಂಸ್ಥೆಯ ಮೂಲಕ ಬುಡಕಟ್ಟು ಜನಾಂಗದ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುವಂತಾಗಿದೆ ಎಂದು ಕಂಚಿಕಾನು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರವೀಂದ್ರ ಕಿಣಿ ಹೇಳಿದರು.
ಅವರು  ಸಂಚಲನ ರಿ. ಹೊಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಹೊಸೂರು-ತೂದಳ್ಳಿಯ ಹೊಂಗಿರಣ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ‘ಶರತ್ ರಂಗ ಸಂಚಲನ -2015′ರ ಎರಡನೇ ದಿನ, ವೇಷ-ವರ್ಣ-ವೈಭವವನ್ನು ಉದ್ಘಾಟಿಸಿ ಮಾತನಾಡಿದರು.

ಶಿರೂರು ಜೆಸಿ‌ಐ ಅಧ್ಯಕ್ಷ ಪ್ರಕಾಶ್ ಮಾಕೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ ಸೇನಾನಿ ಮಂಜುನಾಥ ಮಹಲೆ, ರಂಗ ನಿರ್ದೇಶಕ ಮಹೇಶ ಪಲ್ಲಕ್ಕಿ, ತೂದಳ್ಳಿ-ಹೊಸೂರು ಶಾಲೆಯ ಶಿಕ್ಷಕ ವಿನಾಯಕ ಪಟಗಾರ್ ಉಪಸ್ಥಿತಿರಿದ್ದರು.

ನಿರ್ವಾಹಕ ಗಣಪತಿ ಹೋಬಳಿದಾರ್ ಪ್ರಾಸ್ತಾವಿಸಿದರು. ಸಂಚಲನ ಕಾರ್ಯದರ್ಶಿ ನಾಗಪ್ಪ ಮರಾಠಿ ಸ್ವಾಗತಿಸಿ, ಅಧ್ಯಕ್ಷ ತಿಮ್ಮ ಮರಾಠಿ ವಂದಿಸಿದರು. ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು.

ಬಳಿಕ ನಿನಾಸಂ ಪದವಿಧರರಾದ ಸತ್ಯನಾ ಕೊಡೇರಿ ಹಾಗೂ ಜಯಶೇಖರ ಮಡಪ್ಪಾಡಿ ಅವರಿಂದ ನಾಟಕ ಮುಖವರ್ಣಿಕೆ  ಹಾಗೂ ಮುಖವಾಡ ತಯಾರಿಕಾ ಕಾರ್ಯಾಗಾರ ನಡೆಯಿತು.
ನಿನಾಸಂ ಪದವೀಧರರಾದ ಗಣಪತಿ ಹೋಬಳಿದಾರ್, ಜಯಶೇಖರ್ ಮಡಪ್ಪಾಡಿ, ಸತ್ಯನಾ ಕೊಡೇರಿ


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com