ಕಲೆಯಿಲ್ಲದೇ ಬದುಕಿಲ್ಲ: ಪ್ರದೀಪಚಂದ್ರ ಕುತ್ಪಾಡಿ

ಬೈಂದೂರು: ನಾಟಕ ಮನುಶತ್ವವನ್ನು ಕಲಿಸುತ್ತದೆ. ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಬದುಕನ್ನು ಕಟ್ಟಿಕೊಡುತ್ತದೆ. ನಾಟಕದ ಮೂಲಕ ಎಲ್ಲವನ್ನು ಸಾಧಿಸಲು ಸಾಧ್ಯವಿದೆ. ಕಲೆಯಿಲ್ಲದೇ ಬದುಕೆಂಬುದೇ ಇಲ್ಲ ಎಂದು ರಂಗನಟ ಪ್ರದೀಪಚಂದ್ರ ಕುತ್ವಾಡಿ ಹೇಳಿದರು
 
ಅವರು ಸಂಚಲನ ರಿ. ಹೊಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಮುಲ್ಲಿಬಾರು ಹೊಂಗಿರಣ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ’ಶರತ್ ರಂಗ ಸಂಚಲನ -೨೦೧೫’ರ ನಾಲ್ಕು ದಿನಗಳ ರಂಗಸುಗ್ಗಿಯಲ್ಲಿ ಸಮಾರೋಪ ನುಡಿಗಳನ್ನಾಡಿದರು.

ಪ್ರಕೃತಿಯೊಂದಿಗೆ ಬದುಕುವವರು ರಂಗಭೂಮಿಯ ಕಲಾವಿದರಿಗಿಂತ ಉತ್ತಮವಾಗಿ ನಟಿಸಬಲ್ಲರು. ಪ್ರಕೃತಿಯೊಂದಿಗೆ ಬೆರೆತು, ಬಾಳುವ ಸೂಕ್ಷ್ಮತೆ ಹಳ್ಳಿಗರಿಗೆ ಮಾತ್ರ ತಿಳಿದಿದೆ. ಸಂಚಲನ ಹೊಸೂರು ಶರತ್ ಋತುವಿನಲ್ಲಿ ನಾಟಕವನ್ನು ಆಯೋಜಿಸಿ ಸಂಚಲವನ್ನು ಮೂಡಿಸಿರುವುದು ಶ್ಲಾಘನಾರ್ಹ ಎಂದರು.

ಯಡ್ತರೆ ಗ್ರಾ.ಪಂ. ಅಧ್ಯಕ್ಷ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಸಾದ ಪ್ರಭು, ಮುಲ್ಲಿಬಾರು ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಪಿ. ಮೇಸ್ತ, ಯಡ್ತರೆ ಗ್ರಾ.ಪಂ ಸದಸ್ಯ ಸಿ. ಜೆ. ರೋಯಿ, ಮಾಜಿ ಸದಸ್ಯ ಕುಪ್ಪ ಮರಾಠಿ ಉಪಸ್ಥಿತರಿದ್ದರು.

ಸಂಚಲನ ಹೊಸೂರಿನ ಕಾರ್ಯದರ್ಶಿ ನಾಗಪ್ಪ ಮರಾಠಿ ಸ್ವಾಗತಿಸಿದರು. ಅಧ್ಯಕ್ಷ ತಿಮ್ಮ ಮರಾಠಿ ಧನ್ಯವಾದಗೈದರು. ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು.

ಬಳಿಕ ರಂಗಭೂಮಿ ಉಡುಪಿ ಕಲಾವಿದರಿಂದ ರವಿರಾಜ ಹೆಚ್.ಪಿ ನಿರ್ದೇಶನದ ನಾಗಮಂಡಲ ನಾಟಕ ಪ್ರದರ್ಶನಗೊಂಡಿತು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com