ನೆಟ್ ತಂತ್ರಜ್ಞಾನದ ಕುರಿತು ರಾಜ್ಯಮಟ್ಟದ ಕಾರ‍್ಯಾಗಾರ

ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಗಣಕವಿಜ್ಞಾನ ವಿಭಾಗದಿಂದ ಯುಜಿಸಿ ಪ್ರಾಯೋಜಿತ ನೆಟ್ ತಂತ್ರಜ್ಞಾನದ ಕುರಿತು ರಾಜ್ಯಮಟ್ಟದ ಕಾರ‍್ಯಾಗಾರ ನಡೆಯಿತು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಗಣಕವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ.ಮಂಜಯ್ಯ ಡಿ.ಹೆಚ್.  ಅವರು  ಉನ್ನತ ಮತ್ತು ವಿಶಿಷ್ಟ ಶಿಕ್ಷಣವನ್ನು ಪಡೆದಷ್ಟು ಸಮಾಜದಲ್ಲಿ ನಾವು ಗುರುತಿಸಲ್ಪಡುತ್ತೇವೆ. ನಮ್ಮ ಶಿಕ್ಷಣ ಎನ್ನುವುದು ನಮ್ಮನ್ನು ಉನ್ನತ ಸ್ಥಾನಮಾನಕ್ಕೆ ಏರಿಸುತ್ತದೆ ಎಂದರು. 

ನಾವು ಇಂದು ಡಿಜಿಟಲ್ ತಂತ್ರಜ್ಞಾನಯುಗದಲ್ಲಿದ್ದೇವೆ. ಪೂರಕವಾಗಿ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ ಮತ್ತು ಸಮಾಜ ಬೆಳೆಯುತ್ತಿದೆ. ನಮ್ಮ ಸಂಪತ್ತು ಅತ್ಯಂತ ಹೆಚ್ಚು ಮಟ್ಟದಲ್ಲಿ  ನಮ್ಮ ನಿರೀಕ್ಷೆಗೂ ಮೀರಿ ಉಪಯೋಗಕ್ಕೆ ಬರಬೇಕು. ಅದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ಬೆಳೆಯಬೇಕು.  ನಾವು ಪಡೆದ ಶಿಕ್ಷಣ ವಯಕ್ತಿಕ ನೆಲೆಯಲ್ಲಿ ಹೇಗೆ ಉಪಯೋಗವಾಗಬಹುದು ಎಂಬುದನ್ನು ಯೋಚಿಸಿಕೊಳ್ಳಬೇಕು. ತನ್ಮೂಲಕ ಮೊದಲು ಮನುಷ್ಯನಿಗೆ ತದನಂತರ  ಸಮಾಜಕ್ಕೆ ಅನುಕೂಲಕರವಾಗಿರಬೇಕು ಇವುಗಳಿಂದಾಗಿ ಆರೋಗ್ಯಪೂರ್ಣ ಸಮಾಜದ ನಿರ್ಮಾಣದ ಖಂಡಿತ ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿ ಡಾ.ಹೆಚ್.ಶಾಂತಾರಾಮ್ ವಹಿಸಿದ್ದರು. 

ಭಂರ್ಡಾಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ  ಗಣೇಶ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.  ಉಪನ್ಯಾಸಕ ಕೃಷ್ಣ ವಂದಿಸಿದರು. ಉಪನ್ಯಾಸಕಿ  ವಿಜಯಲಕ್ಷ್ಮಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com