'ಬಾಯ್ಲ ಭ್ಹಾಡೆಬಾಯ್ಲ' ನಾಟಕ ಕೃತಿ ಬಿಡುಗಡೆ

ಹೊಸಬರ ಕ್ರೀಯಾಶೀಲತೆಯನ್ನು ಪ್ರೋತ್ಸಾಹಿಸುವಂತಾಗಬೇಕು: ರಾಜೇಂದ್ರ ಕಾರಂತ

ಕುಂದಾಪುರ: ರಂಗಭೂಮಿ ಬೆಳೆಯಲು ಎಲ್ಲಾ ಬಗೆಯ ನಾಟಕಗಳೂ ಅವಶ್ಯ. ಆದರೆ ಕನ್ನಡ ನಾಟಕಗಳಲ್ಲಿ ಮಡಿವಂತಿಗೆಯನ್ನು ತೋರಿವ ಗುಣವಿದೆಯೇ ಹೊರತೂ ಹೊಸಬರ ಕ್ರೀಯಾಶೀಲತೆಯನ್ನು ಪ್ರೋತ್ಸಾಹಿಸುವ ಗುಣವಿಲ್ಲ. ಇಂದಿಗೂ ಅದೇ ಹಳೆಯ ನಾಟಕಗಳೇ ಮತ್ತೆ  ಚರ್ಚೆ ಒಳಪಡುತ್ತಿವೆ. ಈ ಸ್ಥಿತಿ ಬದಲಾಗಬೇಕು, ನಾಟಕರಂಗದಲ್ಲಿಯೂ ಎಲ್ಲವನ್ನೂ ಸ್ವೀಕರಿಸಿ ವಿಮರ್ಶಿಸುವ ಮನೋಭಾವ ಬೇಳೆಯಬೇಕು ಎಂದು ರಂಗಕರ್ಮಿ ಹಾಗೂ ನಟ ರಾಜೇಂದ್ರ ಕಾರಂತ ಹೇಳಿದರು.

ಅವರು ಕುಂದಪ್ರಭ ಟ್ರಸ್ಟ್ ಆಶ್ರಯದಲ್ಲಿ ಸಾಹಿತಿ, ಜಾದೂಗಾರ ಓಂ ಗಣೇಶ್ ಅವರ ಅನುವಾದಿತ ನಾಟಕ ಕೃತಿ 'ಬಾಯ್ಲ ಭ್ಹಾಡೆಬಾಯ್ಲ'  ಬಿಡುಗಡೆಗೊಳಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ ಆಡಳಿತಾಧಿಕಾರಿ ಡಾ ಎಚ್. ಶಾಂತಾರಾಮ್ ಮಾತನಾಡಿ ಯಾರಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಏನನ್ನಾದರೂ ಸಾಧಿಸಬೇಕೆಂಬ ಹಂಬಲವಿರುತ್ತದೋ ಅಂತಹ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ ಎಂದ ಅವರು, ಒಂದು ಭಾಷೆ ಬೆಳೆಯಬೇಕಾದರೆ, ಆ ಭಾಷೆಯ ಸಾಹಿತ್ಯ ಹೆಚ್ಚು ಅನುವಾದಗೊಳ್ಳಬೇಕು. ಭಾಷೆಯಲ್ಲಿ ಕೊಡು-ಕೊಳ್ಳುಗೆ ಇದ್ದಾಗಲೇ ಅದು ಉನ್ನತಿಯನ್ನು ಕಾಣಲು ಸಾಧ್ಯ ಎಂದರು,
ಓಂ ಗಣೇಶ ಅವರೊಳಗೆ ಒಂದು ಸಾಂಸ್ಕೃತಿಕ ಹೃದಯವಿದೆ. ಸಾಮಾನ್ಯರಲ್ಲಿ ಅಸಮಾನ್ಯತೆಯನ್ನು ಹುಡುಕುವ ವಿಶೇಷ ಗುಣ ಅವರದ್ದು ಎಂದ ಟಿ.ವಿ ನಿರೂಪಕಿ ಶೈಲಜಾ ಸಂತೋಷ್,  ಭಾಷೆಯ ಮೂಲ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಮಾಡುವ ಅನುವಾದ ಯಶಸ್ಸನ್ನು ಕಾಣುತ್ತದೆ ಎಂದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವ್ಯಕ್ತಿ ಚಲನಶೀಲನಾಗದಿದ್ದರೇ ಆತನನ್ನು ಯಾರೂ ಗುರುತಿಸಿಲಾರರು. ಕೆಲಸ ಮಾಡುವುದರೊಂದಿಗೆ ತನ್ನ ಇರುವಿಕೆಯನ್ನು ತೋರ್ಪಡಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾದುದು ಎಂದರು. 

ಉದ್ಯಮಿ ಗೋಪಾಲಕೃಷ್ಣ ಕಾಮತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 'ಬಾಯ್ಲ ಭ್ಹಾಡೆಬಾಯ್ಲ' ಅನುವಾದಿತ ಕೊಂಕಣಿ ನಾಟಕದ ಮೂಲ ಕೃತಿಕಾರ ರಾಜೇಂದ್ರ ಕಾರಂತ್ ಅವರನ್ನು ಸನ್ಮಾನಿಸಲಾಯಿತು. ಕಾರಂತ್ ಅವರ ಮುದ್ದಣ್ಣನ ಪ್ರಮೋಷನ್ ಪ್ರಸಂಗ ಕೃತಿಯಿಂದ ನಾಟಕ ಅನುವಾದಗೊಂಡಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಕುಚ್ಚೂರು ರಮಾನಂದ ಅವರು ಕೊಳಲು ವಾದನ ಕಿವಿಗಳಿಗೆ ಇಂಪು ನೀಡಿತು. ಕುಂದಪ್ರಭ ಟ್ರಸ್ಟ್ ನ ಯು.ಎಸ್. ಶೆಣೈ ಸ್ವಾಗತಿಸಿದರು. ಕೃತಿಕಾರ ಓಂ ಗಣೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಿ. ಜಯವಂತ ಪೈ ಧನ್ಯವಾದಗೈದರು. ಉಪನ್ಯಾಸಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com