ಕೊರಗರ ಕಾಲೋನಿ: ವನಮಹೋತ್ಸವ ಹಾಗೂ ಶ್ರಮದಾನ

ಬೈಂದೂರು: ನುಕ್ಯಾಡಿಯ ಕೊರಗರ ಕಾಲೋನಿಗೆ ಸಮರ್ಪಕವಾದ ರಸ್ತೆ, ವಿದ್ಯುತ್ ಹಾಗೂ ನೀರಿನ ಸೌಕರ್ಯದ ಅಗತ್ಯತೆಯ ಬಗ್ಗೆ ಗಮನಕ್ಕೆ ಬಂದಿದ್ದು, ಕಾಲೋನಿಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಮಹತ್ಮಾಜ್ಯೋತಿಬಾ ಪುಲೆ ಕೊರಗರ ಯುವ ಕಲಾವೇದಿಕೆಯ ಆಶ್ರಯದಲ್ಲಿ ಬೈಂದೂರು ಗ್ರಾಮದ ನುಕ್ಯಾಡಿಯಲ್ಲಿ ವನಮಹೋತ್ಸವ ಹಾಗೂ ಶ್ರಮದಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಗಿಡಗಳನ್ನು ನೆಟ್ಟು ಪರಿಸರ ಉಳಿಸುವ ಕಾರ್ಯವನ್ನು ಮಾಡುವುದರೊಂದಿಗೆ ಪರಿಸರದ ಸ್ವಚ್ಚತೆಯ ಬಗ್ಗೆಯೂ ಗಮನ ಹರಿಸಿರುವುದು ಶ್ಲಾಘನಾರ್ಹ ಎಂದವರು ಹೇಳಿದರು. 

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ತಾಲೂಕು ಕೊರಗ ಶ್ರೇಯಾಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ್ ಕೊರಗ, ಮರವಂತೆ ಕೊರಗ ತನಿಯ ಯುವ ವೇದಿಕೆಯ ಶೇಖರ ಮರವಂತೆ, ಬಾರ್ಕೂರು ಹುಭಾಶಿಕ ಕೊರಗ ಯುವ ಕಲಾವೇದಿಕೆಯ ಗಣೇಶ್ ಬಾರ್ಕೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಕೊರಗ ಕಾಲೋನಿಯ ನಡೆದ ಶ್ರಮದಾನ ಹಾಗೂ ಗೀಡ ನೆಡುವ ಕಾರ್ಯಕ್ರಮದ ಸಾರಥ್ಯವನ್ನು ಲಕ್ಷ್ಮಣ ಕೊರಗ, ಪ್ರಸನ್ನ, ಗಿರೀಶ್ ಮುಂತಾದವರು ವಹಿಸಿದ್ದರು. ಕಾಲೋನಿಯ ಸುತ್ತಲು ಹಬ್ಬಿದ್ದ ಗಿಡಗಂಟಿಗಳನ್ನು ಸ್ವಚ್ಚಗೊಳಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com