ಮನೆ ನಿವೇಶನದ ಹಕ್ಕುಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ

ಕೇಂದ್ರದಲ್ಲಿ ಕಾಂಗ್ರೆಸ್ ನೀತಿಯನ್ನೇ ಬಿಜೆಪಿ ಮುಂದುವರಿಸುತ್ತಿದೆ: ನಿತ್ಯಾನಂದ ಸ್ವಾಮಿ
ಕುಂದಾಪುರ:  ಕೇಂದ್ರದಲ್ಲಿ ಹಿಂದಿನ ಕಾಂಗ್ರೇಸ್ ಸರಕಾರದ ನೀತಿಗಳನ್ನೇ ಇಂದಿನ ಬಿಜೆಪಿ ಸರಕಾರ ಮುಂದುವರಿಸುತ್ತಿದೆ. ದುಡಿಯುವ ವರ್ಗದ ಜನರಿಗೆ ಸರಕಾರ ಅನ್ಯಾಯವೆಸಗುತ್ತಿದೆ. ಈ ಬಗ್ಗೆ ದೇಶಾದ್ಯಂತ ಹೋರಾಟ ನಡೆಯಲಿದೆ ಎಂದು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾನಂದ ಸ್ವಾಮಿ ಹೇಳಿದರು.

ಅವರು ಕುಂದಾಪುರ ತಾಲೂಕು ಪಂಚಾಯತ್ ಹಾಗೂ  ಪುರಸಭೆಯ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. 

ಮನೆ ಇಲ್ಲದವರಿಗೆ ನಿವೇಶನ ನೀಡಲು ಹಿಂದೇಟು ಹಾಕುತ್ತಿರುವ ಕ್ರಮ ಸರಿಯಲ್ಲ. ನಿವೇಶನ ಇಲ್ಲದವರ ಪಟ್ಟಿ  ಈಗಾಗಲೇ ಪ್ರತಿ ಗ್ರಾ.ಪಂ.ನಲ್ಲಿ ತಯಾರಾಗಿದ್ದು, ಭೂಮಿಯನ್ನು ಗುರುತಿಸಿ ಅವರಿಗೆ ಹಕ್ಕುಪತ್ರ ನೀಡಲು ಸರಕಾರ ಮುಂದಾಗಬೇಕು. ಅಧಿಕಾರಿಗಳು ಬಡವರ ಬಗ್ಗೆ ನಿಶ್ಕಾಳಜಿ ತೋರಿದರೇ ಸಿಪಿಎಂ ಪಕ್ಷದ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸುವುದುದಾಗಿ ಅವರು ಹೇಳಿದರು.

ತಾ.ಪಂ. ಎದುರು  ನಡೆದ ಪ್ರತಿಭಟನೆಯಲ್ಲಿ ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ ಅವರಿಗೆ,  ಪುರಸಭೆಯ ಎದುರು ನಡೆದ ಪ್ರತಿಭಟನೆಯಲ್ಲಿ ಪುರಸಭೆಯ ಅಧಕ್ಷೆ ಕಲಾವತಿ ಹಾಗೂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು..

ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ,  ಮುಖಂಡರುಗಳಾದ ಕೆ.ಶಂಕರ್, ಸುರೇಶ್ ಕಲ್ಲಾಗರ್, ಎಚ್.ನರಸಿಂಹ, ವೆಂಕಟೇಶ ಕೋಣಿ, ರಾಜೀವ ಪಡುಕೋಣೆ, ಮಹಾಬಲ ವಡೇರಹೋಬಳಿ, ದಾಸ ಭಂಡಾರಿ,  ನಾಗರತ್ನ, ಸುಶೀಲಾ, ರಾಜೇಶ್ ವಡೇರಹೋಬಳಿ ಮೊದಲಾದವರು ಇದ್ದರು.








ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com