ಗೊಂಬೆಯಾಟ ಅಕಾಡೆಮಿ: ಆಗಸ್ಟ್ ಕಾರ್ಯಕ್ರಮ ಸಂಪನ್ನ

ಕುಂದಾಪುರ: ಇಲ್ಲಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಭವನ ಗೊಂಬೆಮನೆಯಲ್ಲಿ  ಆಗಸ್ಟ್  ತಿಂಗಳ ಕಾರ್ಯಕ್ರಮವಾಗಿ  ಉಪ್ಪಿನಕುದ್ರು  ನೇತಾಜಿ ಕಮಿಟಿ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ 69 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ತಿಂಗಳ ಗೊಂಬೆ ಮನೆ ಅತಿಥಿಯಾಗಿ ಜಯವಂತ ಪೈ, ಕುಂದಾಪುರ  ಇವರು ಭಾಗವಹಿಸಿದ್ದರು.   

ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಶ್ರೀ ಭಾಸ್ಕರ್ ಕೊಗ್ಗ ಕಾಮತ್ ರು ಕಾರ್ಯಕ್ರಮದ ಪ್ರಾಯೋಜಕರಾದ  ನೇತಾಜಿ ಕಮಿಟಿ ಫ್ರೆಂಡ್ಸ್ ನ ಅಧ್ಯಕ್ಷರಾದ ಶ್ರೀ ಕೃಷ್ಣ ದೇವಾಡಿಗ ರನ್ನು ಸನ್ಮಾಸಿದರು. ಅಧ್ಯಾಪಕ ಭಾಸ್ಕರ್ ಮಯ್ಯ,  ರಮೇಶ್ ಐತಾಳ್, ಸದಾಶಿವ ಐತಾಳ್ ಹಾಗೂ ಗಿರೀಶ್  ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.

ಪ್ರಬಂಧ, ಭಾಷಣ ಹಾಗೂ ಚಿತ್ರಕಲೆ ಸ್ಪರ್ಧಾ ವಿಜೇತರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ನಾರಾಯಣ ವಿಕಲಚೇತನ ವಿಶೇಷ ತರಭೇತಿ ಕೇಂದ್ರ, ತಲ್ಲೂರು ಈ ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ಜರುಗಿತು.  ಸ್ಥಳೀಯ ಶಾಲಾ ಮಕ್ಕಳಿಂದ ನೃತ್ಯ, ಪ್ರಹಸನ ಇತ್ಯಾದಿ ಕಾರ್ಯಕ್ರಮಗಳು ಕಿಕ್ಕಿರಿದ ಸಭಿಕರನ್ನು ರಂಜಿಸಿತು. ನಾಗೇಶ್ ಶ್ಯಾನುಭಾಗ್  ಕಾರ್ಯಕ್ರಮ ನಿರೂಪಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com