ಗುಲ್ವಾಡಿ ಗ್ರಾ.ಪಂ. ಸ್ಥಳಾಂತರಿಸದಂತೆ ಆಗ್ರಹಿಸಿ ಪ್ರತಿಭಟನೆ

ಕುಂದಾಪುರ: ತಾಲೂಕಿನ ಗುಲ್ವಾಡಿ ಗ್ರಾಮ ಪಂಚಾಯತನ್ನು ಸ್ಥಳಾಂತರಗೊಳಿಸಬಾರದು ಎಂದು ಆಗ್ರಹಿಸಿ  ಗುಲ್ವಾಡಿಯ ಗ್ರಾಮಸ್ಥರು ಮಧ್ಯಾಹ್ನ ಪ್ರತಿಭಟನೆ ನಡೆಸಿದರು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ  ಕಾರ್ಯದರ್ಶಿ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಈ ಮೊದಲು ಗುಲ್ವಾಡಿ ಕರ್ಕುಂಜೆ ಗ್ರಾಮ ಪಂಚಾಯತಿಯೊಂದಿಗೆ ಸೇರಿಕೊಂಡಿತ್ತು. ಗುಲ್ವಾಡಿ ಗ್ರಾಮಸ್ಥರ ಅನೇಕ ದಶಕಗಳ ಬೇಡಿಕೆಯ ಹಿನ್ನಲೆಯಲ್ಲಿ ಇದೀಗ ಕರ್ಕುಂಜೆ ಗ್ರಾ.ಪಂ.ನಿಂದ ಬೇರ್ಪಟ್ಟು ಸ್ವತಂತ್ರ ಪಂಚಾಯತ್ ಆಗಿ ರೂಪುಗೊಂಡಿದೆ. ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳ ಪ್ರಭಾವದಿಂದ ಪಂಚಾಯತನ್ನು ಗುಲ್ವಾಡಿಯಿಂದ  ಮಾವಿನಕಟ್ಟೆಗೆ  ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿದೆ. ಗುಲ್ವಾಡಿ ಪಂಚಾಯತ್ ಎಲ್ಲಾ ಚಟುವಟಿಕೆಗಳಿಗೂ ಕೇಂದ್ರ ಸ್ಥಳದಲ್ಲಿದೆ. ಪಂಚಾಯತ್ ಇಲ್ಲಿಯೇ ಇರುವುದು ಸೂಕ್ತ ಎಂದರು.

ಈ ಪ್ರತಿಭಟನೆಯಲ್ಲಿ   ಕರ್ಕುಂಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸರ್ದಾರ್ ಸಾಹೇಬ್, ವಿವೇಕಾನಂದ ಭಂಡಾರಿ, ಗ್ರಾ.ಪಂ. ಸದಸ್ಯರಾದ ಎಸ್.ಎಸ್.ಹನೀಫ್, ಸತೀಶ್, ಬಚ್ಚು ನಾಯ್ಕ, ಗಣೇಶ್, ಸಂದೀಪ್ ರೈ, ಅಶ್ವಥ್ ಕುಮಾರ್ ರೈ, ಫಕೀರ್ ಹಸನಬ್ಬ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಗುಲ್ವಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಉಪಾಧ್ಯಕ್ಷ ಜಿ.ಪಿ.ಮೊಹಮ್ಮದ್ ಅವರಿಗೆ  ಮನವಿಯನ್ನು ನೀಡಲಾಯಿತು. 











ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com