ಹೆಮ್ಮಾಡಿ: ಸತೀಶ್‌ ಪೈಗೆ ಸನ್ಮಾನ

ಕುಂದಾಪುರ: ನಿರ್ವಹಿಸುವ ಕೆಲಸ ಯಾವುದೇ ಇರಲಿ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವನೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದಾಗ ಉನ್ನತ ಗೌರವ ಸ್ಥಾನಕ್ಕೇರಿ  ವೃತ್ತಿ ಜೀವನ ಸಾರ್ಥಕತೆ ಕಾಣಲು ಸಾದ್ಯ ಎಂದು ಹೆಮ್ಮಾಡಿ ಶ್ರೀ.ವಿ.ವಿ.ವಿ. ಮಂಡಳಿ ಆಡಳಿತ ನಿರ್ದೇಶಕಿ ಸಾಧು.ಎಸ್ ಬಿಲ್ಲವ ಹೇಳಿದರು.

ಅವರು ಹೆಮ್ಮಾಡಿ ಜನತಾ ಪ್ರೌಢ ಶಾಲೆಯಲ್ಲಿ ಕಚೇರಿ ಸಹಾಯಕರಾಗಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾದ ಸತೀಶ್ ಪೈ ಅವರನ್ನು ಸನ್ಮಾನಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಸಭೆಯಲ್ಲಿ ಜನತಾ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬಿ.ಮೋಹನ್‌ದಾಸ್ ಶೆಟ್ಟಿ,  ಬೈಂದೂರು ರತ್ತು ಬಾ ಜನತಾ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಿ.ಎಸ್.ಭಟ್, ಜನತಾ ಪ.ಪೂ ಕಾಲೇಜಿನ ಪ್ರಾಂಶುಪಾಲ ಸುಧಾಕರ್ ವಕ್ವಾಡಿ, ಸತೀಶ್ ಪೈ ಪತ್ನಿ ವೀಣಾ ಪೈ, ಶಿಕ್ಷಕರಾದ ದಿನಕರ್.ಎಸ್, ಅಶೋಕ್ ಶೆಟ್ಟಿ, ವಿಠಲ್ ನಾಯ್ಕ್, ಜಗದೀಶ್ ಶೆಟ್ಟಿ, ಧಮೇಂದ್ರ ನಾಯ್ಕ್,  ಮಹೇಂದ್ರ  ಕಚೇರಿ ವೃಂದದ ರಘುರಾಮ, ನಾಗೇಶ್, ಪ್ರೇಮ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕರು ಮತ್ತು ಎಲ್ಲಾ ನೌಕರ ವೃಂದದವರ ಪರವಾಗಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬಿ.ಮೋಹನ್ ದಾಸ್ ಶೆಟ್ಟಿ ಅವರು ಸತೀಶ್ ಪೈ ಅವರಿಗೆ ಚಿನ್ನದ ಉಂಗುರ ತೊಡಿಸಿ ಗೌರವಿಸಿದರು.

 ಹಿರಿಯ ಶಿಕ್ಷಕ ದಿನಕರ್.ಎಸ್ ಸ್ವಾಗತಿಸಿದರು. ಶಿಕ್ಷಕ ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ವಿಠಲ್ ನಾಯ್ಕ್ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಅಶೋಕ್ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com