ಸ್ವಾತಂತ್ರ್ಯ ಸಂಭ್ರಮ: ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ

ಕುಂದಾಪುರ: ಇಲ್ಲಿನ ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ವಿಜಯ ಬ್ಯಾಂಕ್ ಗುಲ್ವಾಡಿ ಶಾಖೆಯ ಪ್ರಬಂಧಕ ಬೇಳೂರು ಕರುಣಾಕರ ಶೆಟ್ಟಿ ಧ್ವಜಾರೋಹಣ ಗೈದು ಮಾತನಾಡಿ ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮವನ್ನು ಹುಟ್ಟುಹಾಕುವ ಕೆಲಸ ಮಾಡಬೇಕಾಗಿದೆ. 

ಹಿರಿಯರ ಆದರ್ಶ ಇಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕಿದೆ ಎಂದು ಹೇಳಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೂ ಬಾವುಟವನ್ನು ನೀಡಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. 

ಶಾಲೆಯ ಆಡಳಿತ ನಿರ್ದೇಶಕ ಅರುಣಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಟ್ರಸ್ಟ್ರೀ ಮೌಸೆಸ್ ಮನೋಹರ್, ಪ್ರಾಂಶುಪಾಲರಾದ ವಿಲ್ವ ಡಿ’ಸೆಲ್ವಾ ಈ ಸಂದರ್ಭದಲ್ಲಿ ಉಪಸ್ಥಿತಿತರಿದ್ದರು.

ಶಿಕ್ಷಕಿ ಸುರೇಖಾ ಸ್ವಾಗತಿಸಿ, ಪವಿತ್ರ ವಂದಿಸಿದರು. ಶಿಕ್ಷಕ ಸಂಜೀತ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ತಗ್ಗರ್ಸೆ ಸಹಕರಿಸಿದರು.









ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com