ಇನ್‌ಸ್ಪಾಯರ್ ಅವಾರ್ಡ್: ಕೌಶಿಕ್ ರಾಜ್ಯ ಮಟ್ಟಕ್ಕೆ

ಕುಂದಾಪುರ: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ 'ಇನ್‌ಸ್ಪಾಯರ್ ಅವಾರ್ಡ್'ಗಾಗಿ ಡಿಸ್ಟ್ರಿಕ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಆಂಡ್ ಟ್ರೈನಿಂಗ್(ಡಿಐಇಟಿ) ಉಡುಪಿ ಹಾಗೂ ಡಿಪಾರ್ಟ್‌ಮೆಂಟಲ್ ಆಫ್‌ಸ್ಟೇಟ್ ಎಜುಕೇಶನ್ ರೀಸರ್ಚ್‌ಆಂಡ್ ಟ್ರೈನಿಂಗ್(ಡಿಎಸ್‌ಇಟಆರ್‌ಟಿ) ಬೆಂಗಳೂರು ಬಂಟಕಲ್ಲು  ಎಸ್ ಎಂವಿಐಟಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ  ಸ.ಹಿ.ಪ್ರಾಥಮಿಕ ಶಾಲೆ ಮೂಡ್ಲಕಟ್ಟೆ ಇಲ್ಲಿಯ ವಿದ್ಯಾರ್ಥಿ ಕೌಶಿಕ್ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
 ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ ದಿನಕರ ಶೆಟ್ಟಿ ಪ್ರೋತ್ಸಾಹ ಧನವಾಗಿ 1,000ರೂ ನಗದನ್ನು ನೀಡಿ ಅಭಿನಂದಿಸಿದರು. ಈ ಸಮಯದಲ್ಲಿ ಶಾಲಾ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಆ ಭಾಗದ ಪಂಚಾಯತ್ ಸದಸ್ಯರಾದ  ಸಂತೋಷ ಪೂಜಾರಿ  ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com