ಶ್ರಾವಣದ ಕೆಸರಿನಲ್ಲಿ ಜರುಗಿತು ಕಮಲ ಕೂಟ

ಕುಂದಾಪುರ: ಇಲ್ಲಿನ ಬಿಜೆಪಿ ಯುವ ಮೋರ್ಚಾದ ವತಿಯಿಂದ ಸಟ್ವಾಡಿ ಬಸ್ ನಿಲ್ದಾಣದ ಸಮೀಪ  ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗಾಗಿ ಶ್ರಾವಣದ ಕೆಸರಿನಲ್ಲಿ ಕಮಲ ಕೂಟ ಎಂಬ ಕೆಸರು ಗದ್ದೆಯ ಆಟೋಟ ಸ್ಪರ್ಧೆ  ಜರಗಿತು.

ಕಮಲ ಕೂಟವನ್ನು ಬೈಂದೂರು ಮಾಜಿ ಶಾಸಕ ಕೆ.ಲಕ್ಷ್ಮಿನಾರಾಯಣ ಅವರು ಉದ್ಘಾಟಿಸಿ ಮಾತನಾಡಿ,  ಗ್ರಾಮೀಣ ಕಲೆಗಳನ್ನು ಬಿಂಬಿಸುವ ಈ ಬಗೆಯ ಕ್ರೀಡಾಕೂಟ ಇನ್ನಷ್ಟು ನಡೆದಾಗ ಮಾತ್ರ ನಮ್ಮ ಜನಪದ ಕಲೆಗಳನ್ನು ಉಳಿಸಲು ಸಾಧ್ಯ. ಬಿಜೆಪಿ ಕುಂದಾಪುರ ಆಯೋಜಿಸಿರುವ ಈ ಕ್ರೀಡಾಕೂಟ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ ಕಾರ್ಯಕರ್ತರ ಒಗ್ಗಟ್ಟಿಗೆ  ಹಾಗೂ ಸಂಘಟನೆಗೆ  ಈ ಕ್ರೀಡೆಗಳು ಸಹಕಾರಿಯಾಗುತ್ತದೆ. ಪಕ್ಷವನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಸ್ನೇಹಿತರಾಗಿ ಬಳಿಸಿಕೊಂಡಾಗ ಪಕ್ಷ ಗಟ್ಟಿಯಾಗುತ್ತದೆ ಎಂದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು.

ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಜೇಶ್ ಕಾವೇರಿ  ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೀನುಗಾರ ಪ್ರಕೋಷ್ಟದ ರಾಜ್ಯ ಸಂಚಾಲಕ  ಕಿಶೋರ್ ಕುಮಾರ್,  ಬಿಜೆಪಿ  ಉಡುಪಿ ಜಿಲ್ಲಾ ಉಪಾಧ್ಯಕ್ಷ ವಸಂತ್ ಶೆಟ್ಟಿ ಬೆಳ್ವೆ .  ಕಂದಾವರ ಗ್ರಾ.ಪಂ. ಅಧ್ಯಕ್ಷೆ ಸವಿತಾ  ಪೂಜಾರಿ, ಕೋಣಿ ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ, ಯುವ ಮೋರ್ಚಾ ಜಿಲ್ಲಾ  ಕಾರ್ಯದರ್ಶಿ ಮಹೇಶ್,  ಬಸ್ರೂರು ಗ್ರಾ.ಪಂ. ಅಧ್ಯಕ್ಷ ಕುಮಾರ್ , ಮೇರ್ಡಿ ದಿನಕರ  ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಮಲ ಕೂಟದಲ್ಲಿ ಹಗ್ಗ ಜಗ್ಗಾಟ, ಕಬಡ್ಡಿ, ವಾಲಿಬಾಲ್, ತ್ರೋಬಾಲ್, ಮಾನವ ಪಿರಾಮಿಡ್, ಕರಗಳಲ್ಲಿ ಕಮಲ, ಒಂಟಿಕಾಲು ಓಟ, ಮೂರ‍್ಕಾಲು ಓಟ, ಉಪ್ಪು  ಮೂಟೆ ಓಟ, ಓಟದ ಸ್ಪಧೆ ಇತ್ಯಾದಿಗಳನ್ನು ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ನಡೆಯಿತು. 

ಯುವ ಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ  ಸ್ವಾಗತಿಸಿ, ಮಾಲಿನಿ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು. 
















ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com