ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ ಮಹಾ ಸಭೆ

ಕುಂದಾಪುರ: ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಆತ್ಮಗೌರವ ಮತ್ತು ಪ್ರೇರಣೆಯಿಂದ ಸಮಾಜದ ಗೌರವಕ್ಕೆ ಪಾತ್ರರಾಗಿ ಆತ್ಮ ಸಂತೃಪ್ತಿ ಸಾಧಿಸಲು ಸಾದ್ಯ ಎಂದು ಬಾರ್ಕೂರು ಶ್ರೀ ಬೃಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಸಿ.ಪುರುಷೋತ್ತಮ ಶೆಟ್ಟಿಗಾರ ಹೇಳಿದರು.

ಅವರು ಇತ್ತೀಚೆಗೆ ಕೋಟೇಶ್ವರ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ 29ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸಮಾಜ ಸಂಘದ ಅಧ್ಯಕ್ಷ ಜನಾರ್ದನ ಶೆಟ್ಟಿಗಾರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಿವಿಲ್ ಇಂಜಿನಿಯರ್ ನಾರಾಯಣ ಶೆಟ್ಟಿಗಾರ, ದಕ., ಉಡುಪಿ ಹಿಂದುಳಿದ ಜಾತಿಗಳ ಒಕ್ಕೂಟದ ಉಪಕಾರ್ಯದರ್ಶಿ ಎಮ್.ಸಂಜೀವ ಶೆಟ್ಟಿಗಾರ, ಕುಂದಾಪುರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಪ್ತಿ ಸತೀಶ್ ಶೆಟ್ಟಿಗಾರ, ಮಹಿಳಾ ವೇದಿಕೆಯ ಪ್ರೇಮ ಶೆಟ್ಟಿಗಾರ, ನಿವೃತ್ತ ಶಿಕ್ಷಕಿ ಇಂದಿರಾ ಸಭೆಯಲ್ಲಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಸಮಾಜ ಸಂಘದ ಗೌರವಾಧ್ಯಕ್ಷ ಕೆ. ಗೋವಿಂದ ಶೆಟ್ಟಿಗಾರ ಮಹಿಳಾ ವೇದಿಕೆ ಮತ್ತು  ಸಂಘದ ಕಟ್ಟಡ ಸಮಿತಿಯನ್ನು ಉದ್ಘಾಟಿಸಿದರು. ವೃತ್ತಿಯಲ್ಲಿ ಸಾಧನೆಗೈದ ಹೆಮ್ಮಾಡಿ ಪ.ಪೂ ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ, ಕುಂದಾಪುರ ಆಹಾರ ಇಲಾಖೆಯ ನಿರೀಕ್ಷಕ ವಕ್ವಾಡಿ ಚಂದ್ರ ಶೇಖರ ಶೆಟ್ಟಿಗಾರ, ೨೮ ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಸಮರ್ಥವಾಗಿ ನಿವೃಹಿಸಿದ ಕೆ.ಗೋವಿಂದ ಶೆಟ್ಟಿಗಾರ ಮತ್ತು ಅವರ ಪತ್ನಿ  ಲಕ್ಷೀ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಗೌರವ ಕಾರ್ಯದರ್ಶಿ ಮಂಜುನಾಥ ಶೆಟ್ಟಿಗಾರ,ಎಂ ಸಂಜೀವ ಶೆಟ್ಟಿಗಾರ  ಇವರನ್ನು ಸನ್ಮಾನಿಸಲಾಯಿತು.  ವಿದ್ಯಾ ನಿಧಿಯ ಪ್ರೋತ್ಸಾಹಕರಾದ ವಕ್ವಾಡಿ ಗುಂಡು ಶೆಟ್ಟಿಗಾರ, ವಿಠಲ ಶೆಟ್ಟಿಗಾರ, ರಘುರಾಮ ಶೆಟ್ಟಿಗಾರ, ಗೌರಿ ಶೆಟ್ಟಿಗಾರ, ನಾರಾಯಣ ಶೆಟ್ಟಿಗಾರ. ಜನಾರ್ದನ ಶೆಟ್ಟಿಗಾರ, ಇಂಜಿನಿಯರ್ ಸುರೇಶ್ ಶೆಟ್ಟಿಗಾರ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವಾಸ್ತು ತಜ್ಞ ಬಸವರಾಜ ಶೆಟ್ಟಿಗಾರ ಶುಭಾಶಂಸನೆಗೈದರು. ಶ್ರೀಕಲಾ ಸ್ವಾಗತಿಸಿದರು. ಕಾರ್ಯದರ್ಶಿ ವೆಂಕಟೇಶ್ ವರದಿ ಮಂಡಿಸಿದರು. ಕೋಶಾಧಿಕಾರಿ ಕೃಷ್ಣಮೂರ್ತಿ ಶೆಟ್ಟಿಗಾರ ಲೆಕ್ಕಪತ್ರ ಮಂಡಿಸಿದರು. ಚಂದ್ರಶೇಖರ ಪದ್ಮಶಾಲಿ ಕಾರ್ಯಕ್ರಮ ನಿರೂಪಿಸಿದರು. ಉದಯ ಶೆಟ್ಟಿಗಾರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಇಂದಿರಾ.ಜಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com