ಪೋಟೋಗ್ರಾಫರ್ಸ್ ಅಸೋಷಿಯೇಷನ್ ಕ್ರೀಡಾಕೂಟ

ಬೈಂದೂರು: ಸಂಘನೆಗಳು ಸಮಾಜಮುಖಿ ಕೈಂಕರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜಕ್ಕೆ ನೆರಳಾಗಿ ಕಾರ್ಯಹಿಸಬೇಕು, ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮನುಷ್ಯನ ಜೀವಿತದ ಅವಧಿಯಲ್ಲಿ ಅರ್ಪಣಾ ಮನೋಭಾವದ ಸೇವೆ ಅಗತ್ಯವಾಗಿದ್ದು, ಆ ಮೂಲಕ ಸಾರ್ಥಕತೆ ಕಂಡುಕೊಳ್ಳಬಹುದು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಕಂಬದಕೋಣೆ ಕಂಬಳಗದ್ದೆಯಲ್ಲಿ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಷಿಯನ್ ಕುಂದಾಪುರ ವಲಯದ ಕೆಸರುಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಪೋಟೋಗ್ರಾಫರ್ಸ್ ಸಂಘಟನೆಯು ಅತ್ಯಂತ ಬಲಿಷ್ಠವಾಗಿದ್ದು, ಹತ್ತಾರು ವರ್ಷಗಳೀಚಿದ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ. ಫೋಟೋಗ್ರಾಫರ್‌ಗಳು ತಮ್ಮ ಒತ್ತಡದ ಕೆಲಸದ ನಡುವೆಯು, ಸಮಾಜದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿರುವುದು ಸಮಾಜದ ಮೇಲಿರುವ ಅವರಿಗಿರುವ ತುಡಿತ ನಿಜವಾಗಿಯೂ ಶ್ಲಾಘನೀಯವಾಗಿದೆ ಎಂದರು.

ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಷಿಯನ್ ಕುಂದಾಪುರ ವಲಯ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಪಂ. ಸದಸ್ಯ ಬಾಬು ಶೆಟ್ಟಿ, ತಾ.ಪಂ. ಸದಸ್ಯ ರಾಧಾ ಪೂಜಾರಿ, ಕಂಬದಕೋಣೆ ಗ್ರಾ.ಪಂ. ಅಧ್ಯಕ್ಷ ರಾಜೇಶ್, ಕಂಬದಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ಪೂಜಾರಿ, ಸೌತ್ ಕೆನರಾ ಫೋಟೀಗ್ರಾಫರ‍್ಸ್ ಅಸೋಷಿಯನ್ ಕುಂದಾಪುರ ವಲಯ ಗೌರವಾಧ್ಯಕ್ಷ ರಾಬರ್ಟ್ ಡಿಸೋಜಾ, ಸೌತ್ ಕೆನರಾ ಫೋಟೀಗ್ರಾಫರ‍್ಸ್ ಅಸೋಷಿಯನ್ ಕ್ರೀಡಾ ಕಾರ್ಯದರ್ಶಿ ವಿಲ್ಸ್‌ನ್, ಉದ್ಯಮಿಗಳಾದ ಬಿ.ಎಸ್. ಸುರೇಶ ಶೆಟ್ಟಿ, ಉದಯ ಕುಮಾರ ಶೆಟ್ಟಿ ಹಳಗೇರಿ, ಎಚ್. ವಿಜಯ ಶೆಟ್ಟಿ, ವಿಜಯ ಶೆಟ್ಟಿ ಕಂಬದಕೋಣೆ ಉಪಸ್ಥಿತರಿದ್ದರು.

ಛಾಯಾಗ್ರಾಹಕ ಅಶೋಕ್ ಕುಮಾರ ಶೆಟ್ಟಿ ಸ್ವಾಗತಿಸಿದರು, ದಿವಾಕರ ಶೆಟ್ಟಿ ವಂದಿಸಿ, ವಿಶ್ವನಾಥ ಶೆಟ್ಟಿ ನಿರೂಪಿಸಿದರು. ಕ್ರೀಡಾಕೂಟದ ಮೊದಲು ಛಾಯಾಗ್ರಾಹಕರು ತ್ರಾಸಿಯಿಂದ ಬೈಂದೂರಿನ ತನಕ ಹಾಗೂ ಬೈಂದೂರಿನಿಂದ ಕಂಬದಕೋಣೆಯ ತನಕ ವಾಹನ ಜಾಥ ನಡೆಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com