ಉಡುಪಿ: ವಿದ್ಯಾರ್ಥಿಗಳು ಕಾನೂನು ವಿರುದ್ಧವಾದ ಚಟುವಟಿಕೆಗಳಿಂದ ದೂರವಿರಬೇಕು. ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸುವಲ್ಲಿ ಪ್ರಯತ್ನಶೀಲರಾಗಬೇಕೆಂದು ಉಡುಪಿ ಜಿಲ್ಲೆ ಎಸ್ಪಿ ಅಣ್ಣಾಮಲೈ ಕೆ. ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಸಂತೆಕಟ್ಟೆ ಮೌಂಟ್ ರೋಸರಿ ಹಾಲ್ನಲ್ಲಿ ನಡೆದ ಉಡುಪಿ ಜಿಲ್ಲೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ ಮಾತನಾಡಿ, ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ವಿದ್ಯಾರ್ಥಿನಿಯರ ಕುಟುಂಬಕ್ಕೆ ಪರಿಹಾರ ನೀಡಿರುವ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳಲ್ಲಿ ಒಳ್ಳೆಯ ನಾಯಕತ್ವ ಗುಣ ಬೆಳೆಸುವುದೇ ಸ.ಕಾ.ವಿ.ಸ.ದ ಉದ್ದೇಶವೆಂದರು.
ಉಡುಪಿ ನಗರಸಭೆ ಅಧ್ಯಕ್ಷ ಪಿ. ಯುವರಾಜ್, ಸ.ಕಾ.ವಿ.ಸ. ರಾಜ್ಯ ಪ್ರ. ಕಾರ್ಯದರ್ಶಿ ಶಿಫಲ್ರಾಜ್, ರಾಜ್ಯ ಕಾರ್ಯದರ್ಶಿ ವೀಕ್ಷಿತ್ ಭಂಡಾರಿ ಬಾರ್ಕೂರು, ದ.ಕ. ಜಿಲ್ಲೆ ನಾಯಕರಾದ ಡೊನೊಲ್ಡ್ ನೊರೊನ್ನ, ನಾಗಾರ್ಜುನ್, ರಮಿತ್ ಪೂಜಾರಿ, ಸುದೇಶ್ ಎಸ್. ಶೆಟ್ಟಿ, ಪಿ.ಜಿ. ಸ.ಕಾ.ವಿ.ಸ. ಅಧ್ಯಕ್ಷ ಪ್ರದೀಪ್ ಕಾರ್ಕಳ, ಉಡುಪಿ ಜಿಲ್ಲೆ ಸಂಚಾಲಕ ಧನುಷ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಿನ್ಸ್ಲೀ ಸ್ವಾಗತಿಸಿದರು. ಜೀವಿತಾ ಕಾರ್ಯಕ್ರಮ ನಿರೂಪಿಸಿ, ವಿಲ್ಟನ್ ಸಲ್ದಾನ ವಂದಿಸಿದರು.
0 comments:
Post a Comment