ಬೈಂದೂರು: ಇಲ್ಲಿನ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ 2014-15ನೇ ಸಾಲಿನಲ್ಲಿ 25.70ಲಕ್ಷ ರೂ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಲಾಗಿದೆ ಎಂದು ಸಹಕಾರಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ಅವರು ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಪ್ರಧಾನ ಕಛೇರಿಯ ಆವರಣದಲ್ಲಿ ಜರುಗಿದ 2014-15ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಕೊ-ಆಪರೇಟಿವ್ನ ಪ್ರಗತಿಯ ಕುರಿತು ತಿಳಿಸಿದರು.
ಸಹಕಾರಿಯು 2014-15ನೇ ಸಾಲಿನಲ್ಲಿ 22ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದ್ದು ಲೆಕ್ಕ ಪರಿಶೋಧನೆಯಲ್ಲಿ ’ಎ’ ತರಗತಿಯಲ್ಲಿದೆ ಎಂದ ಅವರು ಸಹಕಾರಿಯು ಅಲ್ಪ ಅವಧಿಯಲ್ಲಿಯೇ ದಾಖಲೆಯ ಪ್ರಗತಿ ಸಾಧಿಸಲು ಕಾರಣೀಕರ್ತರಾದ ಸದಸ್ಯರು ಹಾಗೂ ಗ್ರಾಹಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಪರಿಸರದ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ತರಗತಿಗಳಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಸಹಕಾರಿಯ ಉಪಾಧ್ಯಕ್ಷ ಎಂ. ವಿನಾಯಕ ರಾವ್, ನಿರ್ದೇಶಕರಾದ ನಾಗ ಪೂಜಾರಿ, ಮಂಜು ಪೂಜಾರಿ, ಪ್ರಶಾಂತ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
0 comments:
Post a Comment