ಯುವ ಸಂಚಾಲನದಿಂದ ಸ್ವಚ್ ಭಾರತ್ ಆಂದೋಲನ

ಕುಂದಾಪುರ: ಸ್ವಾತಂತ್ರೋತ್ಸವದ ಅಂಗವಾಗಿ ನಗರದ ಹೋಲಿ ರೋಜರಿ ಚರ್ಚಿನ ಭಾರತೀಯ ಕ್ಯಾಥೋಲಿಕ್ ಯುವ ಸಂಚಾಲನ್ ಹಾಗೂ ಯುವ ಕ್ಯಾಥೋಲಿಕ್ ವಿದ್ಯಾರ್ಥಿ ಸಂಚಾಲನ್ ವತಿಯಿಂದ ಸ್ವಚ್ ಭಾರತ್ ಆಂದೋಲನ ಜರುಗಿತು. 

ಸ್ವಚ್ಚ ಪರಿಸರ ಸ್ವಚ್ಚ ಕುಂದಾಪುರ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾದ ಸ್ವಚ್ ಭಾರತ್ ಆದೋಲನಕ್ಕೆ ಕ್ಯಾಥೋಲಿಕ್ ಯುವ ಸಂಚಾಲನದ ನಿರ್ದೇಶಕರಾದ ಫಾದರ್ ಅನಿಲ್ ಡಿಸೋಜಾ ಚಾಲನೆ ನೀಡಿದರು. ಸಂಚಾಲನದ ಸಂಯೋಜನರಾದ ಫಾಧರ್ ಪ್ರಕಾಶ್ ಡಿಸೋಜಾ, ಅಧ್ಯಕ್ಷೆ ರೋಶನಿ ಮೋನಿಸ್, ಯುವ ಸಂಚಾಲನದ ಅಧ್ಯಕ್ಷೆ ವಿನ್ಸಿಲ್ಲಾ ಅಲ್ಮೇಡಾ ಹಾಗೂ ಇತರ ಸದಸ್ಯರುಗಳು ಹಾಜರಿದ್ದರು. 

ಕ್ಯಾಥೋಲಿಕ್ ಯುವ ಸಂಚಾಲನ್ 25ವರ್ಷ ಪೂರೈಸಿದ ನೆನಪಿಗಾಗಿ ಆಯೋಜಿನಲಾದ ಸ್ವಚ್ಚಭಾರತ್ ಕಾರ್ಯಕ್ರಮದಲ್ಲಿ ಕುಂದಾಪುರದ ಚರ್ಚಿನಿಂದ ಪಾರಿಜಾತದವರೆಗೆ ರಸ್ತೆ ಬದಿಯಲ್ಲಿನ ಕಸಗಳನ್ನು ಆಯ್ದು ಸ್ವಚ್ಚಗೊಳಿಸಲಾಯಿತು.















ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com