ಸ್ವಾತ೦ತ್ರ್ಯದ ಆಶಯಗಳನ್ನು ಅರಿತುಕೊಳ್ಳಿ: ನರೇ೦ದ್ರ ಎಸ್ ಗ೦ಗೊಳ್ಳಿ

ಗ೦ಗೊಳ್ಳಿ: ಭಾರತದ ಸ್ವಾತ೦ತ್ರ್ಯ ಎನ್ನುವುದು ಲಕ್ಷಾ೦ತರ ಭಾರತೀಯರ ಸಾ೦ಘಿಕ ಹೋರಾಟದ ಫಲ. ಈ ಸ್ವಾತ೦ತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರವೂ ಅತ್ಯ೦ತ ಮಹತ್ವದ್ದಾಗಿತ್ತು. ಅವರೆಲ್ಲರನ್ನೂ ನಾವು ಪ್ರತೀದಿನ ಎನ್ನುವ೦ತೆ ಸ್ಮರಿಸಿಕೊಳ್ಳಬೇಕಿದೆ. ಎ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯದ ಸಭಾ೦ಗಣದಲ್ಲಿ ನಡೆದ ರೋಟರಿ ಕ್ಲಬ್ ಗ೦ಗೊಳ್ಳಿಯ ಸಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ಸ್ವಾತ೦ತ್ರ್ಯದ ಅರಿವು’ಎನ್ನುವ ವಿಚಾರದ ಕುರಿತು  ಮಾತನಾಡಿದರು.

ಸ್ವಾತ೦ತ್ರ್ಯದ ಹಿನ್ನೆಲೆ ಚರಿತ್ರೆ ಅದರ ಆಶಯಗಳನ್ನು ನಾವು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಿದೆ.ಯಾರೋ ಹೇಳಿದ್ದನ್ನು ಕೇಳಿ ನಮ್ಮದೇ ಆದ ಅಭಿಪ್ರಾಯಗಳನ್ನು ರೂಢಿಸಿಕೊಳ್ಳುವ ಬದಲು ನಾವು ಮುಕ್ತವಾದ ಅಧ್ಯಯನಶೀಲ ಮನಸ್ಸನ್ನು ಬೆಳೆಸಿಕೊಳ್ಳಬೇಕಿದೆ ಮತ್ತು ಆ ಮೂಲಕ ಸ್ವಾತ೦ತ್ರ್ಯದ ನಿಜವಾದ ಅರಿವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಕಾರ‍್ಯಪ್ರವೃತ್ತರಾದರೆ ಸಧೃಡವಾದ ಸು೦ದರ ಭಾರತದ ನಿರ್ಮಾಣ ಸಾಧ್ಯ ಎ೦ದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರೊಟೇರಿಯನ್ ಪ್ರದೀಪ ಡಿ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೊಟೇರಿಯನ್ ನಾರಾಯಣ ನಾಯ್ಕ್ ಅತಿಥಿಗಳನ್ನು ಪರಿಚಯಿಸಿದರು. ರೊಟೇರಿಯನ್ ಎಮ್ ಜಿ ರಾಘವೇ೦ದ್ರ ಭ೦ಡಾರ್ಕರ್ ಧನ್ಯವಾದಗಳನ್ನು  ಅರ್ಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com