ಮಾನಿಕದ ಮಾನಿಬಾಲೆ ಮಾಯಂದಲಮ್ಮ ಕೃತಿ ಬಿಡುಗಡೆ

ಉಡುಪಿ: ಪೆರ್ಡೂರು ಕ್ಷೇತ್ರದಲ್ಲಿ ಸಿಂಹ ಸಂಕ್ರಮಣದ ದಿನ ನಡೆಯುವ ಮದುಮಕ್ಕಳ ಜಾತ್ರೆಯಲ್ಲಿ ಮದುವೆ, ಸಂತಾನ, ಐಶ್ವರ್ಯದ ತುಳುನಾಡ ದೈವ "ಮಾಯಕದ ಮಾನಿಬಾಲೆ ಮಾಯಂದಲಮ್ಮ" ಕೃತಿಯು ಬಿಡುಗಡೆಯಾಯಿತು.

ಪತ್ರಕರ್ತ ಶೇಖರ ಅಜೆಕಾರು ಅವರ ಈ ಕೃತಿಯನ್ನು ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಆರ್. ಸೇರ್ವೆಗಾರ್ ಅವರು ದೇವಾಲಯದೆದುರಿನ ಮಂಟಪದಲ್ಲಿ ಬಿಡುಗಡೆ ಮಾಡಿದರು. "ನಾಡು ನುಡಿಯ ಆಚರಣೆಗಳು ನಿರಂತರವಾಗಿ ಜನರ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿವೆ. ತುಳುನಾಡಿನ ಮಾಯಕದ ಮಾಯಂದಾಲ ದೈವದ ಕುರಿತ ಈ ಕೃತಿ ಮಾಹಿಪೂರ್ಣವಾಗಿ ಹೊರ ಬಂದಿದೆ" ಎಂದು ಅವರು ಅಭಿಪ್ರಾಯ ಪಟ್ಟರು.

ಮದುಮಕ್ಕಳ ಜಾತ್ರೆಯು ಈ ಭಾಗದಲ್ಲಿ ಅತ್ಯಂತ ಭಕ್ತಿ ಭಾವದಿಂದ ನಡೆಯುವ ಜಾತ್ರೆ, ಅನಂತ ಪದ್ಮನಾಭನ ಸನ್ನಿಧಿಗೆ ಈ ಸಂದರ್ಭದಲ್ಲಿ ಸಹಸ್ರಾರು ಮಂದಿ ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ಸಲ್ಲಿಸುತ್ತಾರೆ. ಮದುಮಕ್ಕಳ ಸಂಭ್ರಮ ಭಕ್ತಿ ಈ ಸಂದರ್ಭದಲ್ಲಿ ವಿಶೇಷವಾಗಿ ಕಾಣಬಹುದು ಎಂದು ಅವರು ಹೇಳಿದರು.

ದೇವಾಲಯದ ಆಡಳಿತಾಧಿಕಾರಿ ಪೂರ್ಣಿಮಾ, ನೂತನ ವಧುವರರಾದ ಬುಕ್ಕಿಗುಡ್ಡೆಯ ಗೋಪಾಲ ನಾಯ್ಕ್ - ಶಶಿಕಲಾ, ಲೇಖಕ ಶೇಖರ ಅಜೆಕಾರು, ಆಡಳಿತ ಮಂಡಳಿಯ ಸದಸ್ಯರು, ಪ್ರಧಾನ ಅರ್ಚಕ ದಿನೇಶ ಅಡಿಗ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com